Select Your Language

Notifications

webdunia
webdunia
webdunia
webdunia

BF.7 ಗಂಭೀರತೆ ಬಹಳ ಕಡಿಮೆ ಇದೆ

BF.7 ಗಂಭೀರತೆ ಬಹಳ ಕಡಿಮೆ ಇದೆ
belagavi , ಮಂಗಳವಾರ, 27 ಡಿಸೆಂಬರ್ 2022 (15:49 IST)
ಕೊವಿಡ್ ರೂಪಾಂತರಿ ತಳಿಯ ಬಗ್ಗೆ ನಮ್ಮ ಸರ್ಕಾರ ಎಚ್ಚರವಹಿಸಿದೆ. ರಾಜ್ಯಾದ್ಯಂತ ತಾಲೂಕು ಆಸ್ಪತ್ರೆಗಳಲ್ಲಿ, ಆರೋಗ್ಯ ಇಲಾಖೆಗೆ ಒಳಪಡುವ ಎಲ್ಲ ಆಸ್ಪತ್ರೆಗಳಲ್ಲಿ ಪೂರ್ವ ತಯಾರಿ ಬಗ್ಗೆ ಪರಿಶೀಲನೆ ಮಾಡಲಾಗುವುದು ಅಂತಾ ಬೆಳಗಾವಿಯಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿಕೆ ನೀಡಿದ್ದಾರೆ. ಕೊವಿಡ್​​​​ ರೂಪಾಂತರಿ BF.7 ಗಂಭೀರತೆ ಬಹಳ ಕಡಿಮೆ ಇದೆ. ಹೀಗಾಗಿ ರಾಜ್ಯವ್ಯಾಪಿ ಮಾಕ್​​ ಡ್ರಿಲ್ ಮಾಡಲಾಗುತ್ತಿದೆ. ಹುಬ್ಬಳ್ಳಿ ಕಿಮ್ಸ್ ಹಾಗೂ ಬೆಳಗಾವಿಯ ಜಿಲ್ಲೆಯ ಒಂದು ಆಸ್ಪತ್ರೆಗೆ ನಾನೇ‌ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡ್ತೇನೆ. ಯಾವುದೇ ಕಠಿಣ ಸಂದರ್ಭ ಎದುರಾದರೂ ಅದಕ್ಕೆ ಆರೋಗ್ಯ ಇಲಾಖೆ ಸಿದ್ದವಾಗಿದೆ. ಆಯಾ ವಿಭಾಗದ ಆರೋಗ್ಯಾಧಿಕಾರಿಗಳು ಅಲ್ಲಿರುವ ಸಂಸ್ಥೆಗಳನ್ನು ಪರಿಶೀಲನೆ ಮಾಡ್ತಾರೆ. ಜನರಿಗೆ ಸರ್ಕಾರ ಮೇಲೆ ನಂಬಿಕೆ ಬರಬೇಕು. ಹೀಗಾಗಿ ರಾಜ್ಯವ್ಯಾಪಿ ಮಾಕ್​​​ ಡ್ರಿಲ್ ಮಾಡಲಾಗುತ್ತಿದೆ. ಜನಜಂಗುಳಿ ಇರೋ ಮಾಸ್ಕನ್ನ ಕಡ್ಡಾಯವಾಗಿ ಧರಿಸಿ. ಗರ್ಭಿಣಿಯರು ಹಾಗೂ ಚಿಕ್ಕಮಕ್ಕಳು ಎಚ್ಚರದಿಂದಿರಬೇಕು ಅಂತಾ ಡಾ.ಕೆ.ಸುಧಾಕರ್​​​​ ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್