Select Your Language

Notifications

webdunia
webdunia
webdunia
webdunia

ಯಶಸ್ವಿನಿ ಯೋಜನೆ ಮತ್ತೆ ಜಾರಿ

Yashavini Yojana is again implemented
belagavi , ಮಂಗಳವಾರ, 27 ಡಿಸೆಂಬರ್ 2022 (16:46 IST)
ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿ ಮಾಡಿದ್ದೇವೆ. ಡಿಸೆಂಬರ್ 31ರವರೆಗೆ ಯೋಜನೆ ಪಡೆದುಕೊಳ್ಳಲು ಅವಕಾಶವಿದೆ ಅಂತಾ ಬೆಳಗಾವಿಯಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದ್ದಾರೆ. ಆದರೆ ಎಲ್ಲರಿಗೂ ಈ ಯೋಜನೆಯಲ್ಲಿ ಅವಕಾಶ ಕೊಡುವುದು ಸಾಧ್ಯವಿಲ್ಲ. ಈಗಾಗಲೇ ನಾವು ಡಿಸೆಂಬರ್​ 31ರವರೆಗೆ ಸದಸ್ಯತ್ವಕ್ಕೆ ಅವಕಾಶ ಮಾಡಿ ಕೊಟ್ಟಿದ್ದೇವೆ. ಅಷ್ಟರೊಳಗೆ 30 ಲಕ್ಷ ಸದಸ್ಯರನ್ನು ನೋಂದಣಿ ಮಾಡಲು ಗುರಿ ಇಟ್ಟುಕೊಂಡಿದ್ದೇವೆ. ಅಷ್ಟು ಸದಸ್ಯರನ್ನು ಮಾಡಲು ಕಾಲಾವಕಾಶ ವಿಸ್ತರಣೆ ಮಾಡುತ್ತೇವೆ. 30 ಲಕ್ಷ ಸದಸ್ಯರಾದರೆ ಅವಧಿ ವಿಸ್ತರಣೆ ಮಾಡುವುದಿಲ್ಲ. ಅವಧಿ ವಿಸ್ತರಣೆ ಮಾಡಲು ಸಮಿತಿಯೊಂದಿದೆ. ಅದು ಕಾಲಾವಧಿ ವಿಸ್ತರಣೆ ಬಗ್ಗೆ ನಿರ್ಧಾರ ಮಾಡುತ್ತದೆ ಎಂದು ಎಸ್​​​.ಟಿ. ಸೋಮಶೇಖರ್ ಉತ್ತರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

150 ಸೀಟ್ ಗೆಲ್ಲೋದು ನಮ್ಮ ಟಾಸ್ಕ್