Select Your Language

Notifications

webdunia
webdunia
webdunia
webdunia

ಕೆಂಗೇರಿ ಗೇಟ್ ಎಸಿಪಿ ಹಾಗೂ ಬೆಸ್ಕಾಂ ಎಇಇ ಯನ್ನು ತರಾಟೆಗೆ ತೆಗೆದುಕೊಂಡ ಸಚಿವ ಸೋಮಣ್ಣ

ಕೆಂಗೇರಿ ಗೇಟ್ ಎಸಿಪಿ ಹಾಗೂ ಬೆಸ್ಕಾಂ ಎಇಇ ಯನ್ನು ತರಾಟೆಗೆ ತೆಗೆದುಕೊಂಡ ಸಚಿವ ಸೋಮಣ್ಣ
ಬೆಂಗಳೂರು , ಬುಧವಾರ, 30 ಅಕ್ಟೋಬರ್ 2019 (10:56 IST)
ಬೆಂಗಳೂರು : ಪಂತರಪಾಳ್ಯದಲ್ಲಿ ರೌಡಿಗಳ ಹಾವಳಿ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಎಸಿಪಿ ಮಂಜುನಾಥ್ ವಿರುದ್ಧ ಸಚಿವ ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.




ನಿನ್ನ ಜೀವನದಲ್ಲಿ ಯಾವ ಒಳ್ಳೆಯ ಕೆಲಸವನ್ನೂ ಮಾಡಿಲ್ಲ. ಒಂದೂವರೆ ವರ್ಷದಿಂದ ಆರಾಮಾಗಿ ಕಾಲ ಕಳೆದಿದ್ದೀಯಾ. ಈಗಲಾದ್ರೂ ಒಳ್ಳೆಯ ಕೆಲಸಮಾಡು. ಎಂದು ಎಸಿಪಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ರೌಡಿಗಳಿಂದ ಏನಾದ್ರೂ ಹೆಚ್ಚುಕಮ್ಮಿ ಆದ್ರೆ ನೀನೇ ಜವಾಬ್ದಾರಿ  ಎಂದು ಕೆಂಗೇರಿ ಗೇಟ್ ಎಸಿಪಿ ಮಂಜುನಾಥ್ ಗೆ  ಸಚಿವರು ಎಚ್ಚರಿಕೆ ನೀಡಿದ್ದಾರೆ.


ಹಾಗೇ ಐಟಿಐ ಲೇಔಟ್ ನಲ್ಲಿ ವಿದ್ಯುತ್ ಕಂಬ ಅಳವಡಿಸದ ಹಿನ್ನಲೆಯಲ್ಲಿ ಬೆಸ್ಕಾಂ ಎಇಇಗೆ ವಸತಿ ಸಚಿವ ವಿ.ಸೋಮಣ್ಣ ತರಾಟೆ ತೆಗೆದುಕೊಂಡಿದ್ದಾರೆ. ಹೊಟ್ಟೆಗೆ ಏನು ತಿನ್ನುತ್ತೀರಿ? ನಿಮಗೆ ಇನ್ನೆಷ್ಟು ದಿನ ಬೇಕು? ಕಂಬ ಅಳವಡಿಸುವುದಕ್ಕೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಆ ವೇಳೆ ಉತ್ತರಿಸಲು ಮುಂದೆ ಬಂದ ಮಹಿಳಾ ಸಿಬ್ಬಂದಿಗೆ ಸಾಕು ಸುಮ್ಮನಿರಮ್ಮ  ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಜಾರಕಿಹೊಳಿ ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್ ನೀಡಬೇಡಿ-ಕಾಂಗ್ರೆಸ್ ಕಾರ್ಯಕರ್ತನ ಮನವಿ