Select Your Language

Notifications

webdunia
webdunia
webdunia
webdunia

ಮೈಕ್ರೋಬಿ ಫೌಂಡೇಶನ್ ವತಿಯಿಂದ ಮಣ್ಣು ಜೀವಿಸಲಿ ಅಭಿಯಾನ ಕಾರ್ಯಕ್ರಮ

ಮೈಕ್ರೋಬಿ ಫೌಂಡೇಶನ್ ವತಿಯಿಂದ ಮಣ್ಣು ಜೀವಿಸಲಿ ಅಭಿಯಾನ ಕಾರ್ಯಕ್ರಮ
bangalore , ಬುಧವಾರ, 22 ಜೂನ್ 2022 (20:41 IST)
ಮೈಕ್ರೋಬಿ ಫೌಂಡೇಶನ್ ವತಿಯಿಂದ ಮಣ್ಣು ಜೀವಿಸಲಿ ಅಭಿಯಾನ ಕಾರ್ಯಕ್ರಮವನ್ನ  ರಾಜ್ಯಾದ್ಯಂತ ಶುರುಮಾಡಲಾಗುವುದು ಎಂದು ಖ್ಯಾತ ಸಾವಯವ ತಜ್ಙರಾದ  ಡಾ. ಕೆ.ಆರ್ ಹುಲ್ಲುನಾಚೇಗೌಡರು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ  ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ. ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿ ಮಟ್ಟದಲ್ಲಿ 9 ತಿಂಗಳ ಬೃಹತ್ ಪ್ರಾಯೋಗಿಕ ಕಾರ್ಯಗಾರ ನಡೆಸಲು ಸಿದ್ದವಾಗಿದೆ. ಮೈಕ್ರೋಬಿ ಫೌಂಡೇಶನ್ನ ಮತ್ತೊಂದು ಮಹತ್ವದ ಯೋಜನ ಮಾದರಿ ಗ್ರಾಮ' ನಿರ್ಮಾಣ ಮೊದಲ ಹಂತದಲ್ಲಿ 9 ಜಿಲ್ಲೆಗಳ ಒಂದೊಂದು ಗ್ರಾಮವನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗುವುದು. ಸಾವಯವ ಕೃಷಿಯಲ್ಲಿ ಯಶಸ್ವಿಯಾಗುವಂತ ರೈತರಿಗೆ ನಿರಂತರ ಮಾರ್ಗದರ್ಶನವನ್ನು ನೀಡುವುದು, ಸರ್ಕಾರಿ ಇಲಾಖೆಗಳಿಂದ ಅನುದಾನಗಳು, ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರಾಟ ಮುಂತಾದ ಸರ್ವತೋಮುಖವಾಗಿ ಗ್ರಾಮವನ್ನು ವಿಕಾಸಗೊಳಿಸಲಾಗುವುದು ಎಂದು ತಿಳಿಸಿದ್ರು.
 

Share this Story:

Follow Webdunia kannada

ಮುಂದಿನ ಸುದ್ದಿ

ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ: ಉಚಿತ ಬಸ್ ಪ್ರಯಾಣ