Select Your Language

Notifications

webdunia
webdunia
webdunia
webdunia

ಕಣ್ಣು ಹಾಯಿಸಿದಷ್ಟು ದೂರವೂ ಬರೀ ಹಿಮ....! ಮನೆಯಿಂದ ಬರೋದೆಲ್ಲಿ..?

ಹಿಮಪಾತ

geetha

ಹಿಮಾಚಲ , ಗುರುವಾರ, 8 ಫೆಬ್ರವರಿ 2024 (17:35 IST)
ಹಿಮಾಚಲ - ಹಿಮಪಾತ ಇದರ ಹರಿವಿಕೆ ಜಾಸ್ತಿ ಆದ್ರೆ ಮುಗಿದೇ ಹೋಯ್ತು ಬಿಡಿ ಕಥೆ.ನಿಲ್ಲೋವರೆಗೂ ಆ ಭಾಗದಲ್ಲಿ ಎದುರಾಗುವ ಸಂಕಷ್ಟ, ಸಮಸ್ಯೆಗಳನ್ನು ಕಣ್ಣಿಂದ ನೋಡೊದಕ್ಕೂ ಭಯಾನಕ ಹಿಂಸೆ.ಇದೀಗ ಹಿಮಾಲಯದ ತಪ್ಪಲು, ದೇವಭೂಮಿ ಆದ ಹಿಮಾಚಲ ಪ್ರದೇಶದಲ್ಲಿ ಭಾರೀ ಪ್ರಮಾಣದ ಹಿಮಪಾತದ ನರ್ತನಕ್ಕೆ ಇಲ್ಲಿನ ಪರಿಸ್ಥಿತಿ ಅಕ್ಷರಶಃ ಅತಂತ್ರವಾಗ್ತಿದೆ. ಎಲ್ಲಿ ನೋಡಿದರೂ ಹಿಮದ ರಾಶಿಯೇ ಕಣ್ಣ ಮುಂದೇ ಬರುತ್ತಿದೆ. ಇದರ ಎಫೆಕ್ಟ್ಗೆ ಜನಜೀವನ ಅಸ್ತವ್ಯಸ್ತವಾಗಿದಲ್ಲದೇ, ಸಂಚಾರ ವ್ಯವಸ್ಥೆಯೂ ಕೂಡ ಅತಂತ್ರದ ಹಾದಿಯನ್ನ ಹಿಡಿದಿದೆ.

ದೇವಭೂಮಿ ಹಿಮಾಚಲ ಮೊದಲೇ ಹೇಳಿ ಕೇಳಿ ಹಿಮಾಚ್ಚಾದ್ಧಿತ ಪ್ರದೇಶ. ಹೀಗಿದ್ದೂ ಕೂಡ ವಾತಾವರಣ ಮತ್ತು ಹವಾಮಾನದಲ್ಲಿ ವೈಪರಿತ್ಯವಾದಾಗ ದೊಡ್ಡ ಪ್ರಮಾಣದಲ್ಲಿ ಹಿಮಪಾತ ಬಂದು ವಕ್ಕರಿಸೋದು ಮಾಮೂಲಿ.ಸದ್ಯಕ್ಕೆ ಈಗ ಹಿಮಾಚಲ ಪ್ರದೇಶದ ಜೊತೆಗೆ ಆ ಕಡೆಗೆ ಕಣಿವೆ ರಾಜ್ಯ ಕಾಶ್ಮೀರದಲ್ಲೂ ಭಾರೀ ಹಿಮಪಾತ ಆಗ್ತಿದೆ. ಪರಿಸ್ಥಿತಿ ಅಂತೂ ಅಲ್ಲೋಲ ಕಲ್ಲೋಲವೇ ಆಗ್ತಿದೆ... ರಸ್ತೆಗಳು ಬಂದ್, ದೈನಂದಿನ ಜನರ ವಹಿವಾಟುಗಳಿಗೆ ಭಾರೀ ಸಮಸ್ಯೆ ಎದುರಾಗ್ತಿದೆ.. ಎಲ್ಲವೂ ಕೂಡ ಅಲ್ಲಿಂದ ಅಲ್ಲೇ ನಿತ್ರಾಣ ಹಂತಕ್ಕೆ ಹೋಗಿ ತಲುಪಿವೆ.ಕಾಶ್ಮೀರ ಮತ್ತು ಹಿಮಾಚಲ ಎರಡು ಕಡೆಯಲ್ಲೂ ಹಿಮ ದೊಡ್ಡ ಅಘಾತವನ್ನೇ ತಂದೋಡ್ಡಿದೆ... ಜನರ ದೈನಂದಿನ ಬದುಕು ಅಂತೂ ಈ ಹಿಮಪಾತ ಕಡಿಮೆ ಆಗೋವರೆಗೂ ಅತಂತ್ರವೇ ಆಗಿದೆ. ಮನೆಯಿಂದ ಹೊರ ಬರೋದಕ್ಕೂ ಜನರು ಕಷ್ಟಪಡ್ತಾ ಇದ್ದಾರೆ.

 ಇನ್ನಷ್ಟು ಮೀತಿ ಮೀರಿ ಹೋಗುವ ಎಲ್ಲ ಸಾಧ್ಯತೆಗಳು ಇರೋದ್ರಿಂದ ಅಪಾಯದ ಮಟ್ಟ ಯಾವ ಹಂತಕ್ಕೆ ಹೋಗಿ ತಲುಪಲಿದೆ ಅನ್ನೋದನ್ನ ಈಗಲೇ ಊಹಿಸೋದು ಕಷ್ಟ ಕಷ್ಟ.ಹೌದು ಕಾಶ್ಮೀರ ಮತ್ತು ಹಿಮಾಚಲದಲ್ಲಿ ಹಿಮಾಪಾತ ಭಾರೀ ಅವಾಂತರವನ್ನೇ ಸೃಷ್ಟಿಸುತ್ತಿದೆ. ಕಣ್ಣು ಹಾಯಿಸಿದಷ್ಟೂ ದೂರವೇ ಕಾಣೋದು ಬರೀ ಬಿಳಿ ಬಿಳಿ ರಾಶಿಯ ಹಿಮದ ಹೊಗೆ.ಅಲ್ಲಿಗೆ ಗೇಸ್ ಮಾಡಿ ಜನರು ಹೊರಗೆ ಬಂದರೆ, ಅದರಲ್ಲೇ ಕರಗಿ ನೀರಾಗದೇ ಇರ್ತಾರಾ ಇಲ್ವಾ ಅಂತ.ಎತ್ತಾ ನೋಡಿದರೂ ಬರೀ ಹಿಮವೇ. ರಸ್ತೆಯಂತೂ ಕಣ್ಣಿಗೆ ಬೀಳಂಗಿಲ್ಲ. ಮನೆಯಿಂದ ಈಚೆ ಬಂದರು ಎದುರು ಗಡೆ ಬರೀ ಮಸುಕಿನ ನೋಟವಷ್ಟೇ ಕಣ್ಣಿಗೆ ರಾಚುತ್ತೆ. ಅಪ್ಪಿ ತಪ್ಪಿ ಇನ್ನೊಂದಷ್ಟು ಮೀಟರ್ ಹೆಜ್ಜೆ ಹಾಕಿದರೋ ಐಸ್ ಆಗೋದಂತೂ ಬಹುತೇಕ ನಿಕಿ

Share this Story:

Follow Webdunia kannada

ಮುಂದಿನ ಸುದ್ದಿ

ಪಂಚರಾಜ್ಯ ಎಲೆಕ್ಷನ್ ಬಳಿಕ ಬಿಜೆಪಿಗೆ ಬಲ ಬಂತಾ....?