Publish Date: Sun, 01 Jul 2018 (22:24 IST)
Updated Date: Sun, 01 Jul 2018 (22:31 IST)
ಹಾವೊಂದು ಮಹಿಳೆಯನ್ನ ಟಾರ್ಗೆಟ್ ಮಾಡಿ ವಾರದಲ್ಲಿ ಮೂರು ಸಲ ಕಚ್ಚಿದ ಘಟನೆ ನಡೆದಿದೆ.
ಹಾವೊಂದು ಮಹಿಳೆಯನ್ನ ಟಾರ್ಗೆಟ್ ಮಾಡಿ ವಾರದಲ್ಲಿ ಮೂರು ಸಲ ಕಚ್ಚಿದ ಘಟನೆ ದಾವಣಗೆರೆಯ ಹರಿಹರ ಪಟ್ಟಣದಲ್ಲಿ ನಡೆದಿದೆ.
ನಗರದ ಜೆಸಿ ಬಡಾವಣೆ ನಿವಾಸಿ ಖಮಲ್ ತಾಜ್ (32) ಹಾವಿನ ದ್ವೇಷ ಕ್ಕೆ ಗುರಿಯಾದ ಮಹಿಳೆಯಾಗಿದ್ದು. ಕಳೆದ ಒಂದು ವಾರದಿಂದ ಹಾವು ಈಕೆಯನ್ನು ಬೆಂಬಿಡದೆ ಕಾಡುತ್ತಿದೆ.
ನಾಲ್ಕು ದಿನಗಳ ಹಿಂದೆ ಹಾವು ಕಚ್ಚಿದ್ದು ಚಿಕಿತ್ಸೆ ಪಡೆದು ಮನೆಗೆ ಹೋಗುತ್ತಿದ್ದಂತೆ ಮತ್ತೆ ಹಾವು ಕಚ್ವುತ್ತಿದೆ. ಹಾವು ಕಚ್ಚಿದ ಪರಿಣಾಮ ಮಹಿಳೆಯನ್ನು ಹರಿಹರ ತಾಲ್ಲೂಕು ಆಸ್ಪತ್ರೆ ಗೆ ದಾಖಲು ಮಾಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ನಾಗ ದೋಷ ಇರಬೇಕೆಂದು ಭಾವಿಸಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಪೂಜೆ ಸಲ್ಲಿಸಲು ಹೊರಟಿದ್ದಾರೆ.