Select Your Language

Notifications

webdunia
webdunia
webdunia
webdunia

ಐಸಿಸಿ ನಡೆಸಿದ ಸಮೀಕ್ಷೆಯಿಂದ ಮಹಿಳೆಯರ ಬಗ್ಗೆ ಬಯಲಾಯಿತು ರಹಸ್ಯ!

ಐಸಿಸಿ ನಡೆಸಿದ ಸಮೀಕ್ಷೆಯಿಂದ ಮಹಿಳೆಯರ ಬಗ್ಗೆ ಬಯಲಾಯಿತು ರಹಸ್ಯ!
ದುಬೈ , ಗುರುವಾರ, 28 ಜೂನ್ 2018 (08:59 IST)
ದುಬೈ: ಸಾಮಾನ್ಯವಾಗಿ ಕ್ರಿಕೆಟ್ ಇಷ್ಟಪಡುವವರು ಪುರುಷರು ಎಂದೇ ನಾವೆಲ್ಲಾ ತಿಳಿದುಕೊಂಡಿದ್ದೇವೆ. ಆದರೆ ಐಸಿಸಿ ನಡೆಸಿದ ಸಮೀಕ್ಷೆಯೊಂದು ಕುತೂಹಲಕಾರಿ ಅಂಶವನ್ನು ಹೊರ ಹಾಕಿದೆ.
 

ವಿಶ್ವದಾದ್ಯಂತ ಕ್ರಿಕೆಟ್ ಇಷ್ಟಪಡುವ ಒಂದು ಶತಕೋಟಿಗೂ ಅಧಿಕ ಮಂದಿಯಿದ್ದಾರಂತೆ. ಆದರೆ ಅವರಲ್ಲಿ ಹೆಚ್ಚಿನವರು ಮಹಿಳೆಯರೂ ಇದ್ದಾರೆ ಎಂಬ ಕುತೂಹಲಕಾರಿ ಅಂಶವನ್ನು ಐಸಿಸಿ ಸಮೀಕ್ಷೆ ಬಹಿರಂಗಪಡಿಸಿದೆ.

ಒಂದು ಶತಕೋಟಿ ಜನರ ಪೈಕಿ ಶೇ.39 ಮಹಿಳೆಯರು ಕ್ರಿಕೆಟ್ ನ್ನು ಇಷ್ಟಪಡುತ್ತಾರಂತೆ! ವಿಶೇಷವೆಂದರೆ ಕ್ರಿಕೆಟ್ ನತ್ತ ಆಕರ್ಷಿತರಾಗುತ್ತಿರುವ ಮಹಿಳೆಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆಯಂತೆ. ಅದರಲ್ಲೂ ಮಹಿಳಾ ಕ್ರಿಕೆಟ್ ನೇರಪ್ರಸಾರ ಮಾಡುವಂತೆ ಈ ನಾರಿಯರು ಬೇಡಿಕೆಯಿಟ್ಟಿದ್ದಾರಂತೆ. ಅಂತೂ ಕ್ರಿಕೆಟ್ ನ್ನು ಆರಾಧಿಸುವಲ್ಲೂ ಮಹಿಳೆಯರು ತಾವು ಪುರುಷರಿಗೆ ಕಮ್ಮಿಯಿಲ್ಲ ಎಂದು ತೋರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲೆಳೆಯಲು ಸುವರ್ಣಾವಕಾಶ ಕಳೆದುಕೊಂಡರು ವಿರಾಟ್ ಕೊಹ್ಲಿ!