ಪ್ರತಿ ಸೆಕೆಂಡಿಗೆ ಬಾಹ್ಯಾಕಾಶದಲ್ಲಿ ಲೆಕ್ಕವಿಲ್ಲದಷ್ಟು ಚಲನೆಗಳು ನಡೆಯುತ್ತಲೇ ಇರುತ್ತವೆ. ಇವುಗಳಲ್ಲಿ ಕೆಲವನ್ನು ಸಂಶೋಧನೆಯ ಮೂಲಕ ದಾಖಲಿಸಬಹುದು. ಕೆಲವು ದಾಖಲಿಸಲು ತುಂಬಾ ಕಷ್ಟ. ನಮ್ಮ ಸೌರವ್ಯೂಹದ ಮಧ್ಯಭಾಗದಲ್ಲಿರುವ ಸೂರ್ಯನಲ್ಲಿ ಇತ್ತೀಚೆಗೆ ಅಂತಹ ದೊಡ್ಡ ಘಟನೆ ಕಂಡುಬಂದಿದೆ. ಪ್ರತಿ ಕ್ಷಣವೂ ಸೂರ್ಯನೊಳಗೆ ಸರಣಿ ಸ್ಫೋಟಗಳು ನಡೆಯುತ್ತಿವೆ. ಇದು ಸೂರ್ಯನ ಚಲನೆಗೆ ಪ್ರಮುಖ ಕಾರಣವಾಗಿದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿ ಅಚ್ಚರಿಗೊಳಿಸುವ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಸೂರ್ಯನಲ್ಲಿ ಹಾವು ಹರಿದಾಡುತ್ತಿರುವಂತೆ ಕಾಣುತ್ತದೆ. ಇವೆಲ್ಲದರ ಮಧ್ಯೆ ಸೂರ್ಯನ ತಾಪಮಾನವು ತುಂಬಾ ಹೆಚ್ಚಾಗಿರುವಂತೆ ಕಂಡುಬರುತ್ತಿದೆ. ಯಾವುದೇ ಜೀವಿ ಅದನ್ನು ತಲುಪಲು ಅಸಾಧ್ಯವಾಗುವಂತೆ ಗೋಚರವಾಗುತ್ತಿದೆ. ಹಾಗಾದ್ರೆ ಸೂರ್ಯನಲ್ಲಿ ಕಂಡುಬಂದ ಈ ವಸ್ತು ಏನು ಎಂಬ ಗೊಂದಲಕ್ಕೆ ವಿಜ್ಞಾನಿಗಳು ಉತ್ತರವನ್ನು ನೀಡಿದ್ದಾರೆ. ಇದು ಬೆಂಕಿಯ ಅಲೆಯಂತೆ ಕಾಣುತ್ತದೆ. ಇದನ್ನು ಸೌರ ತರಂಗ ಎಂದು ಕರೆಯಬಹುದು. ಉಳಿದ ಸ್ಫೋಟದಂತೆ, ಈ ತರಂಗವೂ ಸ್ಫೋಟಗಳಿಂದ ಮಾಡಲ್ಪಟ್ಟಿದೆ. ವಿಜ್ಞಾನಿಗಳು ಅದಕ್ಕೆ ಸರ್ಪೆಂಟ್ ಇನ್ಸೈಡ್ ಸನ್ ಎಂದು ಹೆಸರಿಸಿದ್ದಾರೆ.