Select Your Language

Notifications

webdunia
webdunia
webdunia
webdunia

ಬಾನಿನಲ್ಲಿ ವಲಸೆ ಹಕ್ಕಿಗಳ ಹಾರಾಟ

Flight of Migratory Birds in Bani
ಪ್ರಕೃತಿ ಮತ್ತು ಜೀವವೈವಿಧ್ಯ ಎಂದಿಗೂ ಮುಗಿಯದಂಥ ಅನೇಕ ಅಚ್ಚರಿಗಳನ್ನು ತನ್ನ ಗರ್ಭದಲ್ಲಿ ಅಡಗಿಸಿಕೊಂಡಿರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಹಕ್ಕಿಗಳ ಸುಂದರ ದೃಶ್ಯವಿದೆ. ಒಡಿಶಾದಲ್ಲಿ ವಲಸೆ ಹಕ್ಕಿಗಳ ಸುಸಮಯ ಶುರುವಾಗಿದೆ. ಚಿಲಿಕಾ ಸರೋವರದಲ್ಲಿ ಈಗ ಈ ಹಕ್ಕಿಗಳ ಕಲರವ ನೋಡಬಹುದಾಗಿದೆ. AIS ಅಧಿಕಾರಿ ಸುಶಾಂತ್​​​​ ನಂದಾ ಈ ವಿಡಿಯೋ ಹಂಚಿಕೊಂಡ ನಂತರ ವೈರಲ್ ಆಗುತ್ತಿದೆ. ಕೆಳಗೆ ನೀರು, ಮೇಲೆ ಬಾನು ನಡುವೆ ವಲಸೆ ಹಕ್ಕಿಗಳ ಹಾರಾಟ. 16 ಸೆಕೆಂಡುಗಳ ಈ ದೃಶ್ಯ ನೋಡುಗರನ್ನು ಅನುಪಮ ಜಗತ್ತಿಗೆ ಕರೆದೊಯ್ಯುತ್ತಿದೆ. ಹಕ್ಕಿಗಳಿಗೆ ಈ ಚಿಲಿಕಾ ಸ್ವರ್ಗವೇ ಸರಿ. ಸಂತಾನೋತ್ಪತ್ತಿಗೆ ಸೂಕ್ತವಾದ ಜಾಗವನ್ನು ಹುಡುಕಿಕೊಂಡು ಅದಕ್ಕೆ ಬೇಕಾದ ತಯಾರಿಯಲ್ಲಿ ಮುಳುಗಿವೆ ಈ ಹಕ್ಕಿಗಳು. ಪ್ರಶಾಂತವಾದ ಜಾಗ, ಗೂಡು ಕಟ್ಟಲು ಎಲೆ, ನಾರುಗಳ ಸಂಗ್ರಹಣೆ ಹೀಗೆ ಭವಿಷ್ಯದ ಕೆಲಸಗಳಲ್ಲಿ ತನ್ಮಯವಾಗಿವೆ. ಇವುಗಳು ಹೀಗೆ ಈ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದನ್ನು ನೋಡುವುದೇ ಚೆಂದ. ಹಲವಾರು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ದೇಹದ ಭಾಗಗಳು ಕೊಳದಲ್ಲಿ ಪತ್ತೆ!