Select Your Language

Notifications

webdunia
webdunia
webdunia
webdunia

ಸ್ಮೃತಿ ಇರಾನಿ ನಡೆ ಖಂಡಿಸಿ ಕಾಂಗ್ರೆಸ್ ಕಚೇರಿಯಲ್ಲಿ ಹೋಮ

Smriti Irani's move condemns Congress office's protest
bangalore , ಶುಕ್ರವಾರ, 29 ಜುಲೈ 2022 (19:05 IST)
ಸೋನಿಯಾಗಾಂಧಿ ಬಗ್ಗೆ ಸ್ಮೃತಿ ಇರಾನಿ ನಡೆ ಖಂಡಿಸಿ ಯುವ ಕಾಂಗ್ರೆಸ್​ನಿಂದ ಕಾಂಗ್ರೆಸ್ ಕಚೇರಿಯಲ್ಲಿ ಹೋಮ-ಪೂಜೆ ನಡೆಸಲಾಗ್ತಿದೆ.
 
ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್​ ನೇತೃತ್ವದಲ್ಲಿ ಹೋಮ ನಡೆಯುತ್ತಿದ್ದು,ಕೇಂದ್ರ ಸಚಿವೆಗೆ ಒಳ್ಳೇ ಬುದ್ಧಿ ಬರಲಿ ಅಂತಾ ನಲಪಾಡ್​ ಪ್ರಾರ್ಥನೆ ಮಾಡ್ತಿದ್ದಾರೆ.ಇನ್ನು ಇದೇ ವೇಳೆ ಮಾತನಾಡಿದ ನಲಪಾಡ್ ಸೋನಿಯಾ ಗಾಂಧಿ ಕುರಿತು ಸಚಿವೆ ಸ್ಮತಿ ಇರಾನಿ ನಡವಳಿಕೆ ಖಂಡನೀಯ.ಸೋನಿಯಾ ಗಾಂಧಿಗೆ 70 ವರ್ಷ ವಯಸ್ಸಾಗಿದ್ದು , ಸಚಿವೆ
ಸ್ಮತಿ ಇರಾನಿ ನಡುವಳಿಕೆ ಯನ್ನ ಖಂಡಿಸ್ತೇವೆ.ಕೇಂದ್ರ ಸಚಿವೆಗೆ ಒಳ್ಳೆಯದಾಗಲಿ, ಬುದ್ದಿ ಬರಲಿ ಜೊತೆಗೆ ಬದಲಾವಣೆ ಆಗಲಿ ಎಂದು ಗಣ ಹೋಮ ಮಾಡಲಾಗ್ತಿದೆ ಎಂದು ಹೇಳಿದರು. ಅಷ್ಟೇ ಅಲ್ಲದೇ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ಖಂಡನಿಯವಾಗಿದೆ.ಬಸ್ ಗೆ ಕಲ್ಲು ಹೊಡೆದರೆ, ನಮ್ಮ ರಾಜ್ಯದ ಜನತೆಗೆ ತೊಂದರೆ ಆಗಲಿದೆ. ಅದನ್ನ ಸೂರ್ಯ ಅರ್ಥ ಮಾಡ್ಕೋಳ್ಳಬೇಕು.ಮಂಗಳೂರಿನಲ್ಲಿ ಹತ್ಯೆ ಆಗ್ತಿದೆ. ಹತ್ಯೆ ತಡೆಯಲು ಸರ್ಕಾರ ವಿಫಲವಾಗಿದೆ ಎಂದು ನಲಪಾಡ್ ಅಸಾಮಾಧಾನ ವ್ಯಕ್ತಪಡಿಸಿದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರ ಲಾಂಛನದ ಬದಲಾವಣೆಗೆ ವಿರೋಧ