ಕರ್ನಾಟಕದ ಹಿಂದಿನ ಕಾಂಗ್ರೆಸ್ ಸರಕಾರ ಸರಕಾರಿ ಶೈಕ್ಷಣಿಕ ಸಂಸ್ಥೆಗಳಿಗೆ ವಸ್ತ್ರ ಸಂಹಿತೆ ಅನಿವಾರ್ಯ ಮಾಡಿತ್ತು. ಖಾಸಗಿ ಶಾಲೆಗೆ ಅದರ ಸ್ವಂತದ ಸಮವಸ್ತ್ರ ನಿರ್ಧರಿಸುವ ಸ್ವಾತಂತ್ರ್ಯ ಇದೆ. ಈಗ ಸರಕಾರಿ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಧಾರ್ಮಿಕ ಚಿಹ್ನೆಗಳ ಮೇಲೆ ನಿಷೇಧ ಹೇರಲಾದರೂ ಹಿಜಾಬ್‌ಗೆ ಅನುಮತಿ ನೀಡಬೇಕೋ ಅಥವಾ ಬೇಡವೋ ? ಇದು ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಅವಲಂಬಿಸಿದೆ. ಆದ್ದರಿಂದ ಮುಸಲ್ಮಾನ ಸಂಘಟನೆಗಳು ತಮ್ಮದೇ ಆದ ಮಹಾವಿದ್ಯಾಲಯಗಳು ತೆರೆಯುವ ನಿರ್ಣಯ ತೆಗೆದುಕೊಂಡಿದೆ.
ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಕಳೆದ ೫ ವರ್ಷಗಳಲ್ಲಿ ಮುಸಲ್ಮಾನ ಸಂಘಟನೆಗಳು ಮಹಾವಿದ್ಯಾಲಯ ತೆರೆಯುವುದಕ್ಕಾಗಿ ಒಂದೇ ಒಂದು ಅರ್ಜಿ ಸಲ್ಲಿಸಿರಲಿಲ್ಲ. ಅರ್ಜಿದಾರರಿಗೆ ಮಹಾವಿದ್ಯಾಲಯ ತೆರೆಯುವುದಕ್ಕಾಗಿ ಎಲ್ಲಾ ಮಾನದಂಡಗಳು ಪೂರ್ಣಗೊಳಿಸಿದರೆ ಆಗ ಅವರಿಗೆ ಮಾನ್ಯತೆ ಸಿಗಬಹುದು...
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!