Webdunia - Bharat's app for daily news and videos

Install App

ಸರಣಿ ಸರಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಸುಮಾರು 12 .5 ಲಕ್ಷ ರೂ ಬೆಲೆಬಾಳುವ ಚಿನ್ನಾಭರಣ ವಶ

Webdunia
ಶನಿವಾರ, 3 ಜುಲೈ 2021 (14:38 IST)
ಬೆಂಗಳೂರು: ಮಲ್ಲೇಶ್ವರಂ ಠಾಣೆ ಪೊಲೀಸರು ಕಾರ್ಯಾಚರಣೆ ನೆಡಸಿ ಸರಗಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ರಾಹಿಂ ಪಾಷ (32) ಹಾಗೂ ಅಜರ್ ಪಾಷ (29) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 223 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
 
ಮಲ್ಲೇಶ್ವರಂ ಬಳಿ ಗುರುವಾರ ರಾತ್ರಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ವಿಚಾರಿಸಿದಾಗ ಸುಮಾರು 16 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಚೈನ್ ಸ್ನಾಚ್, ರಾಬರಿ ಡಕಾಯಿತಿಯಲ್ಲಿ ಭಾಗಿಯಾಗಿದ್ದ ಆರೋಪಿಗಳು ಕಳೆದ ಮಾರ್ಚ್ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿಗಳು ಜೈಲಿನಲ್ಲಿ ಪರಸ್ಪರ ಪರಿಚಯಸ್ಥರಾಗಿದ್ದರು. ಹೊರಬಂದ ನಂತರ ಜೊತೆಯಾಗಿ ಬೆಳಗ್ಗೆ 5 ರಿಂದ 6:30 ರ ಸಮಯದಲ್ಲಿ ಸರಗಳವು ಮಾಡುತ್ತಿದ್ದರು 
ಸರಗಳವು ಮಾಡುವ ಹಿಂದಿನ ದಿನ ಬೈಕ್ ಕಳವು ಮಾಡಿ ಕೃತ್ಯಕ್ಕೆ ಬಳಕೆ ಮಾಡಿದ್ದಾರೆ.
 
ಆರೋಪಿಗಳ ದಂಗುಬಡಿಸುವ ಕಂಪ್ಲೀಟ್ ಹಿಸ್ಟರಿ ಬಿಚ್ಚಿಟ್ಟ ಉತ್ತರ ಡಿ.ಸಿ.ಪಿ ಧರ್ಮೇಂದ್ರ ಕುಮಾರ್ ಮೀನಾ :
 
ಜೂನ್ 2 ರಂದು ಬೆಳಗ್ಗೆ ಸುಮಾರು 6 ಗಂಟೆ ಸಮಯದಲ್ಲಿ ಬೆಂಗಳೂರು ಉತ್ತರ ವಿಭಾಗದ ಸುಬ್ರಮಣ್ಯ ನಗರ ಪೊಲೀಸರು  ಠಾಣಾ ವ್ಯಾಪ್ತಿಯ 15 ನೇ ಬ್ಲಾಕ್‌ನಲ್ಲಿ ಮತ್ತು ಜೂನ್ 4 ರಂದು ಬೆಳಿಗ್ಗೆ ಸುಮಾರು 6.30 ರ ಸಮಯದಲ್ಲಿ ರಾಜಗೋಪಾಲನಗರದ ಕೈಗಾರಿಕಾ ಪ್ರದೇಶದ 8ನೇ ಕ್ರಾಸ್ ನಲ್ಲಿ ಸರಗಳ್ಳತನ ಪ್ರಕರಣ ವರದಿಯಾಗಿದ್ದು, ಈ ಪ್ರಕರಣಗಳಲ್ಲಿ ದೊರೆತ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡು ಆರೋಪಿಗಳ ಪತ್ತೆಗಾಗಿ ಮಲ್ಲೇಶ್ವರಂ ಉಪ ವಿಭಾಗದಲ್ಲಿನ ಎಲ್ಲಾ ಪೊಲೀಸ್ ಠಾಣೆಗಳಿಗೆ ಅಲರ್ಟ್ ಮಾಡಿ ವಿಶೇಷ ಮುಂಜಾನೆ ಗಸ್ತು ವ್ಯವಸ್ಥೆ ಮಾಡಲಾಗಿತ್ತು ಎಂದು ಬೆಂಗಳೂರು ಉತ್ತರ  ಡಿ.ಸಿ.ಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದರು.
 
ಮಲ್ಲೇಶ್ವರಂ ಪೊಲೀಸ್ ಠಾಣೆಯ ಪಿ.ಎಸ್‌.ಐ ಗಳಾದ ಪಿ ರೇಣುಕಾ, ಗೀತಾ ತಟ್ಟಿ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿ ಅದರಲ್ಲಿ ದೊರೆತ ಆರೋಪಿಗಳ ಚಹರ ಆಧಾರದ ಮೇಲೆ ಅದರಂತೆ ನಿನ್ನೆ  ಬೆಳಿಗ್ಗೆ ಸುಮಾರು 7.30 ರ ಸಮಯದಲ್ಲಿ ಮಲ್ಲೇಶ್ವರಂ 8ನೇ ಮುಖ್ಯರಸ್ತೆಯ 7ನೇ ಕ್ರಾಸಿನಲ್ಲಿ ಗಸ್ತಿನಲ್ಲಿದ್ದಾಗ ಇಬ್ಬರು ಆರೋಪಿಗಳು ಸುಜ್ಜುಕಿ ಆಕ್ಸಿಸ್ ದ್ವಿಚಕ್ರವಾಹನದಲ್ಲಿ ಬರುತ್ತಿರುವಾಗ ಪೊಲೀಸರನ್ನು ಕಂಡು ತಿರುಗಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿ ಹಿಡಿದು ತಮ್ಮ ವಶಕ್ಕೆ ಪಡೆದುಕೊಂಡು ಪೊಲೀಸ್ ಠಾಣೆಗೆ ತಂದು ವಿಚಾರಣೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
 
ವಶಕ್ಕೆ ಪಡೆದು ತೀವ್ರ ವಿಚಾರಣೆ ನೆಡೆಸಿದಾಗ ಕಳವು ಮಾಡಲು ಬಂದಿರುವುದಾಗಿ ತಿಳಿದು ಒಪ್ಪಿಕೊಂಡಿದ್ದಾರೆ ಹೀಗಾಗಿ  ಆರೋಪಿಗಳಾದ ಪಾದರಾಯಣಪುರದ ಗೋರಿಪಾಳ್ಯದ ಇಬ್ರಾಹಿಂ ಪಾಷ ಅಲಿಯಾಸ್ ಕಾಲೂ (32), ಶಿವಾಜಿನಗರದ ಬ್ರಾಡ್ ವೇ ರಸ್ತೆಯ ಅಜರ್ ಪಾಶ ಅಲಿಯಾಸ್ ಅಜರ್ (20) ಎನ್ನುವವರನ್ನು ವಿಚಾರಣೆ ಮಾಡಿ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸುಮಾರು 12.5 ಲಕ್ಷ ರೂ ಬೆಲೆ ಬಾಳುವ 223 ಗ್ರಾಂ ಚಿನ್ನಾಭರಣ ಮತ್ತು ೩ ದ್ವಿಚಕವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಮಲ್ಲೇಶ್ವರಂ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದರು.
 
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿ ಇಬ್ರಾಹಿಂ ಪಾಷಾ ಇತ್ತೀಚೆಗೆ ಹೊಸಕೋಟೆ ಪೊಲೀಸ್ ಠಾಣೆಯ ಬ್ಯಾಟರಿ ಕಳವು ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ, ಮಾರ್ಚ್ 19 ರಂದು  ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಈತನು 2008 ರಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಆರೋಪಿಯು ಹಲವು ಸರಗಳ್ಳತನ ಪ್ರಕರಣಗಳ ಆರೋಪಿಯಾಗಿದ್ದಾನೆ. ಈತನ ವಿರುದ್ಧ  ಜೆ.ಪಿ.ನಗರ, ಹನುಮಂತನಗರ, ಜೆ.ಜೆ.ನಗರ, ಕಾಟನ್‌ಪೇಟೆ, ಚಾಮರಾಜಪೇಟೆ, ಕಗ್ಗಲೀಪುರ, ಶಿವಾಜಿನಗರ, ಸುಬ್ರಮಣ್ಯನಗರ, ಚಂದ್ರಲೇಔಟ್, ಹೊಸಕೋಟೆ ಪೊಲೀಸ್ ಠಾಣೆಗಳಲ್ಲಿ ಸರಗಳ್ಳತನ, ದರೋಡೆ ಯತ್ನ, ಶಾಪ್ ಕಳವು, ಸಾಮಾನ್ಯ ಕಳವು ಸೇರಿ ಒಟ್ಟು 16 ಪ್ರಕರಣಗಳಲ್ಲಿ  ಜೈಲಿಗೆ ಹೋಗಿ ಬಂದಿದ್ದಾನೆ. ಆರೋಪಿಯು ಈ ಪೊಲೀಸ್ ಠಾಣೆಗಳಲ್ಲಿ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದಾ ಎಂದು ತಿಳಿಸಿದರು.
 
ಆಜರ್ ಪಾಷ ಶಿವಾಜಿನಗರದ  ದ್ವಿಚಕ್ರವಾಹನ ಕಳವು ಪ್ರಕರಣದಲ್ಲಿ ಜೈಲಿಗೆ ಹೋಗಿ ಮೇ 18 ರಂದು  ಬಿಡುಗಡೆಯಾಗಿದ್ದ. ಈತನ ವಿರುದ್ಧ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರ ಮೇಲೆ ಹಲ್ಲೆ, ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ದರೋಡೆ ಸಂಚು ಮತ್ತು ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರವಾಹನ ಕಳವು ಸೇರಿ ಒಟ್ಟು 3  ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದ ಎಂದು ಮಾಹಿತಿ ನೀಡಿದರು.
 
ಆರೋಪಿಗಳು ಅಪರಾಧ ಕೃತ್ಯವೆಸಗಿದಾಗ  ಗೊತ್ತಾಗಬಾರದೆಂದು ಅಪರಾಧ ಕೃತ್ಯವೆಸಗಲು ಹೋಗುವ ಹಿಂದಿನ ರಾತ್ರಿ ದ್ವಿಚಕ್ರವಾಹನವನ್ನು ಕಳವು ಮಾಡಿಕೊಂಡು ಅದನ್ನ  ಬಳಸಿ ಬೆಳಗಿನ ಜಾವದಲ್ಲಿ ವಯಸ್ಸಾದ ವೃದ್ಧರನ್ನು ಗುರಿಯಾಗಿಸಿಕೊಂಡು ಅಪರಾಧ ಕೃತ್ಯವೆಸಗುತ್ತಿರುವುದು ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳ ಬಂಧನದಿಂದ ಮಲ್ಲೇಶ್ವರಂ ನ 3, ಸುಬ್ರಮಣ್ಯನಗರದ, ರಾಜಗೋಪಾಲನಗರದ, ವಿಜಯನಗರದ, ಕಾಮಾಕ್ಷಿಪಾಳ್ಯದ, ಕೊಡಿಗೇಹಳ್ಳಿಯ ತಲಾ 1 ಪ್ರಕರಣ ಸೇರಿ   ಒಟ್ಟು 8 ಸರಗಳ್ಳತನ ಪ್ರಕರಣಗಳು ಹಾಗೂ ಅನ್ನಪೂರ್ಣೇಶ್ವರಿ ನಗರದಲ್ಲಿ ಸರಗಳ್ಳತನ ಪ್ರಯತ್ನ ಪ್ರಕರಣ, ಯಶವಂತಪರದಲ್ಲಿ  ವಿಜಯನಗರದಲ್ಲಿ ದ್ವಿಚಕ್ರವಾಹನ ಕಳ್ಳತನದ  2 ಪ್ರಕರಣ ಸೇರಿ  ಒಟ್ಟು 11 ಪ್ರಕರಣಗಳು ಪತ್ತೆಯಾಗಿವೆ ಮತ್ತು ಆರೋಪಿಗಳ  ಇನ್ನು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
 
ಈ ಪ್ರಕರಣದಲ್ಲಿ ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಕೆ.ಎಸ್. ವೆಂಕಟೇಶ್‌ ನಾಯ್ಡು  ಮಾರ್ಗದರ್ಶನದಲ್ಲಿ ಮಲ್ಲೇಶ್ವರಂ ಪೊಲೀಸ್ ಇನ್ಸ್‌ಪೆಕ್ಟರ್‌ ಬಿ.ಕೆ ಮಂಜಯ್ಯ  ನೇತೃತ್ವದಲ್ಲಿ ಪಿ.ಎಸ್ಐ ಪಿ ರೇಣುಕಾ  ಗೀತಾ ತಟ್ಟಿ ಮತ್ತು ಪ್ರೋ ಪಿಎಸ್‌ಐ ಶ್ರೀಶೈಲ ಉಟಗಿ ಹಾಗು  ಸಿಬ್ಬಂದಿಗಳಾದ .ರೆಹಮಾನ್‌ ಶರೀಷ್, ಜಿ ಪ್ರಕಾಶ್, ಉಮೇಶ್, ಸುನೀಲ್ ಕುಮಾರ್ ಶ್ರೀ.ತಿಮ್ಮೇಗೌಡ  ಶ್ರೀನಾಗಪ್ಪ ಜೋಗಿ, ಕೆ.ಜೆ ಗಣೇಶ್, ಸುಭಾಷ್, ಪ್ರಮೋದ, ಅನಂತಕುಮಾರ್, ರವಿಚಲವಾದಿ, ಪ್ರಶಾಂತ ಹಾಗೂ ತಂತ್ರಜ್ಞಾನ ವಿಭಾಗದ ಸಿಬ್ಬಂದಿಗಳಾದ.ಅನಂತರಾಜು, .ಚಂದ್ರಶೇಖರ್ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುದ್ದಾರೆ ಎಂದು ಶ್ಲಾಘಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments