Select Your Language

Notifications

webdunia
webdunia
webdunia
webdunia

ಎಸ್‌.ಎಂ. ಕೃಷ್ಣ ಅಂತಿಮ ದರ್ಶನ ಪಡೆದ ರಮ್ಯಾ: ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಪ್ರತಿಕ್ರಿಯೆ

Former Chief Minister SM Krishna

Sampriya

ಬೆಂಗಳೂರು , ಮಂಗಳವಾರ, 10 ಡಿಸೆಂಬರ್ 2024 (09:06 IST)
Photo Courtesy X
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಇಂದು ನಸುಕಿನ ಜಾವ ನಿಧನರಾಗಿದ್ದು, ನಟಿ ಮತ್ತು ಮಾಜಿ ಸಂಸದೆ ರಮ್ಯಾ ಅವರು  ಸದಾಶಿವನಗರಕ್ಕೆ ಆಗಮಿಸಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.  

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ರಮ್ಯಾ ಅವರು ಈಗ ನಾನು ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿ ತೆರಳಿದರು.

ರಮ್ಯಾ ಅವರು ಎಸ್‌.ಎಂ.ಕೃಷ್ಣ ಅವರ ನೇತೃತ್ವದಲ್ಲೇ ರಾಜಕಾರಣಕ್ಕೆ ಕಾಲಿಟ್ಟು, ಕಾಂಗ್ರೆಸ್‌ ಪಕ್ಷದಲ್ಲಿ ಅತ್ಯಂತ ಶೀಘ್ರವಾಗಿ ಬೆಳೆದರು. ತಮ್ಮ ಸೆಲೆಬ್ರಿಟಿ ಇಮೇಜ್‌ನಿಂದಾಗಿ ಹೈಕಮಾಂಡ್‌ನಲ್ಲಿ ಶೀಘ್ರವಾಗಿ ಗುರುತಿಸಿಕೊಂಡಿದ್ದರು.

ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಸೇರಿ ಹೈಕಮಾಂಡ್‌ನ ಪ್ರಭಾವಶಾಲಿ ನಾಯಕರ ಜೊತೆ ನೇರವಾಗಿ ಸಂಪರ್ಕ ಸಾಧಿಸಬಲ್ಲ ರಾಜ್ಯದ ಕೆಲವೇ ಕಾಂಗ್ರೆಸ್ಸಿಗರಲ್ಲಿ ರಮ್ಯಾ ಕೂಡ ಒಬ್ಬರಾಗಿದ್ದರು.

ಕೃಷ್ಣ ಅವರನ್ನು ಅಂಕಲ್‌ ಎಂದೇ ಕರೆಯುತ್ತಿದ್ದ ರಮ್ಯಾ, ಕೃಷ್ಣ ಅವರ ಮಾರ್ಗದರ್ಶನದಲ್ಲೇ ರಾಜಕೀಯ ನಡೆಗಳನ್ನು ಇಟ್ಟವರು. ಮಂಡ್ಯ ಜಿಲ್ಲೆಯ ಕಾಂಗ್ರೆಸ್‌ನ ಒಳ ರಾಜಕಾರಣವನ್ನು ಭೇದಿಸಿ ಸಂಸದರಾಗಲು ಈ ಮಾರ್ಗದರ್ಶನವೇ ಅವರಿಗೆ ರಕ್ಷೆಯಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ಕನಸುಗಾರ ಎಸ್.ಎಂ. ಕೃಷ್ಣ ನಿಧನಕ್ಕೆ ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಕಂಬನಿ