Select Your Language

Notifications

webdunia
webdunia
webdunia
webdunia

ಏಕಕಾಲಕ್ಕೆ "ಜಯ ಭಾರತ ಜನನಿಯ ತನುಜಾತೆ" ಲಕ್ಷಕಂಠಗಳಲ್ಲಿ ಕನ್ನಡ ಗೀತಗಾಯನ

ಏಕಕಾಲಕ್ಕೆ
bangalore , ಗುರುವಾರ, 28 ಅಕ್ಟೋಬರ್ 2021 (21:06 IST)
ಇಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮುಖ್ಯ ಕೇಂದ್ರ ಕಚೇರಿ,ಕೇಂದ್ರ ಕಾರ್ಯಾಗಾರ, ಎಲ್ಲ ಘಟಕಗಳಲ್ಲಿ  ಏಕಕಾಲಕ್ಕೆ  "ಜಯ ಭಾರತ ಜನನಿಯ ತನುಜಾತೆ"
ಲಕ್ಷಕಂಠಗಳಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮವನ್ನು ಬೆಳಗ್ಗೆ : 11:00 ಗಂಟೆಗೆ ಹಮ್ಮಿಕೊಳ್ಳಲಾಯಿತು.
 
ಮೊದಲಿಗೆ ನಾಡಗೀತೆ ಆ ನಂತರ  ರಾಷ್ಟ್ರಕವಿ ಕುವೆಂಪು ಅವರ 'ಬಾರಿಸು ಕನ್ನಡ ಡಿಂಡಿಮವ’, ನಿಸಾರ್ ಅಹಮ್ಮದ್​ರವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಡಾ. ಹಂಸಲೇಖ ಅವರ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’  ಏಕಕಾಲದಲ್ಲಿ ಎಲ್ಲ ಸ್ಥಳಗಳಲ್ಲಿ ಮೊಳಗಿದವು.
 
 ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಎಂಬ ಪಣ ತೊಡುತ್ತೇನೆ. ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಬದ್ಧನಾಗಿರುತ್ತೇನೆ ಎಂದು ಸಂಕಲ್ಪ ಮಾಡಲಾಯಿತು.
 
ಈ ಸಂದರ್ಭದಲ್ಲಿ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಅನ್ಬುಕುಮಾರ್ ರವರು ಮಾತನಾಡಿ ಕನ್ನಡವನ್ನು ಬಳಸಲು ಮತ್ತು ಕನ್ನಡದಲ್ಲಿ ವ್ಯವಹರಿಸಲು ಪ್ರೋತ್ಸಾಹಿಸುವ ಸಲುವಾಗಿ ಅಧಿಕಾರಿಗಳು&ಸಿಬ್ಬಂದಿಗಳಿಗೆ ರೂ.5000 ಬಹುಮಾನ ನೀಡಲು ರೂ.50,000/- ಗಳನ್ನು ಮೀಸಲಿಡುವುದಾಗಿ ತಿಳಿಸಿರುತ್ತಾರೆ.
kannada

Share this Story:

Follow Webdunia kannada

ಮುಂದಿನ ಸುದ್ದಿ

ಮಾತೃಭಾಷೆಯನ್ನು ಗೌರವಿಸುವುದು ತಾಯಿಯನ್ನು ಗೌರವಿಸಿದಂತೆ