ಅವಧಿಗೆ ಮುನ್ನ ಸಿಧು ಬಿಡುಗಡೆ ಸಾಧ್ಯತೆ

Webdunia
ಗುರುವಾರ, 29 ಡಿಸೆಂಬರ್ 2022 (16:23 IST)
ರಸ್ತೆ ರಂಪಾಟ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಕಳೆದ ಎಂಟು ತಿಂಗಳಿಂದ ಜೈಲಿನಲ್ಲಿದ್ದಾರೆ. ಅವರನ್ನು ಸನ್ನಡತೆ ಆಧಾರದ ಮೇಲೆ ಅವಧಿ ಪೂರ್ವ ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ಗಣರಾಜ್ಯೋತ್ಸವ ದಿನ ಒಟ್ಟು 51 ಕೈದಿಗಳನ್ನು ಬಿಡುಗಡೆಗೊಳಿಸಲು ಪಂಜಾಬ್‌ನ ಆಪ್‌ ಸರ್ಕಾರ ತೀರ್ಮಾನಿಸಿದೆ. ಇದರಲ್ಲಿ ಸಿಧು ಅವರ ಹೆಸರು ಕೂಡ ಇದೆ. ಈ ನಿರ್ಧಾರ ಕುರಿತು ಶೀಘ್ರವೇ ಸಂಪುಟ ಸಭೆಯಲ್ಲಿ ಚರ್ಚಿಸಿ ಅನುಮತಿ ಪಡೆಯಲಾಗುವುದು ಎಂದು ಸರ್ಕಾರದ  ಮೂಲಗಳು ತಿಳಿಸಿವೆ. ಸಂಪುಟ ಸಭೆಯ ಅನುಮತಿ ದೊರೆತ ನಂತರ ಬಿಡುಗಡೆಯಾಗಲಿರುವ ಕೈದಿಗಳ ಪಟ್ಟಿಯನ್ನು ರಾಜ್ಯಪಾಲರ ಸಮ್ಮತಿಗೆ ಕಳಿಸಿಕೊಡಲಾಗುತ್ತದೆ. 1988ರಲ್ಲಿ ನಡೆದ ರಸ್ತೆ ಹೊಡೆದಾಟ ಪ್ರಕರಣದಲ್ಲಿ ಸಿಧು ಶಿಕ್ಷೆಗೆ ಗುರಿಯಾಗಿದ್ದರು. ಸುಪ್ರೀಂ ಕೋರ್ಟ್‌ ಅವರಿಗೆ ಒಂದು ವರ್ಷದ ಕಾರಾಗೃಹ ಶಿಕ್ಷೆ ವಿಧಿಸಿದೆ. ಕಳೆದ ಮೇ ತಿಂಗಳ 20ರಂದು ಅವರು ಪಟಿಯಾಲ ಜೈಲು ಸೇರಿದ್ದರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಣಾಮ್ ಸಾಬ್ ಪ್ರೊಟೆಸ್ಟ್ ಮಾಡ್ತಿದ್ದೀನಿ.. ಬರ್ತ್ ಡೇ ದಿನ ಬಿವೈ ವಿಜಯೇಂದ್ರಗೆ ಅಮಿತ್ ಶಾ ಕಾಲ್ video

ಮೈಸೂರಿಗೆ ಫ್ಲೈ ಓವರ್ ಬೇಡವೇ ಬೇಡ: ಸಿಎಂಗೆ ಪತ್ರ ಬರೆದ ಸಂಸದ ಯದುವೀರ್ ಒಡೆಯರ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಜಿಯೋ ಫೋನ್ ನಲ್ಲಿ ಬಳಸಿದ್ರೆ ಅದಾನಿಗೆ ದುಡ್ಡು: ರಾಹುಲ್ ಗಾಂಧಿ ಹೇಳಿಕೆ ಭಾರೀ ಟ್ರೋಲ್ video

ಮುಂದಿನ ಸುದ್ದಿ
Show comments