Publish Date: Thu, 29 Dec 2022 (13:54 IST)
Updated Date: Thu, 29 Dec 2022 (13:57 IST)
ಕಟ್ಟಡದ ಮೇಲಿಂದ ಬಿದ್ದು ಪವನ್ ಎಂಬ (19) ವಿದ್ಯಾರ್ಥಿ ಸಾವನಾಪ್ಪಿರುವ ಘಟನೆ ಸುಬ್ರಮಣ್ಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬೆಳಗಿನ ಜಾವ 4.30 ರ ಸುಮಾರಿಗೆ ಮನೆಯ ಕಟ್ಟವೊಂದರ ಮೇಲಿಂದ ಬಿದ್ದು ಸಾವನಾಪ್ಪಿದ್ದು,ಘಟನಾ ಸ್ಥಳಕ್ಕೆ ಸುಬ್ರಮಣ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಎಸ್ ಸಿ ಕಾಲೇಜು ನಲ್ಲಿ ವ್ಯಾಸಂಗ ಮಾಡ್ತಿದ್ದ ಪವನ್ ಫೈನಲ್ ಇಯರ್ ಬಿಬಿಎ ವ್ಯಾಸಂಗ ಮಾಡ್ತಿದ್ದ .ನಿನ್ನೆ ಸಂಜೆ ಕಾಲೇಜಿನಿಂದ ಹೆಗ್ಗನಹಳ್ಳಿ ಮನೆಗೆ ಹೋಗಿದ್ದ.ಬಳಿಕ ಮನೆಯಲ್ಲಿ ಬ್ಯಾಗ್ ಇಟ್ಟು ಸುಬ್ರಮಣ್ಯನಗರ ಮಿಲ್ಕ್ ಕಾಲೋನಿ ಬಳಿ ವಿದ್ಯಾರ್ಥಿ ಬಂದಿದ್ದ.ಮಿಲ್ಕ್ ಕಾಲೋನಿ ಮೈದಾನ ಸಮೀಪದ ಕಟ್ಟಡವೊಂದರ ಮೇಲಿಂದ ಬಿದ್ದು ಪವನ್ ಸಾವನಾಪ್ಪಿದ್ದಾನೆ.ಸದ್ಯ ಸಾವಿನ ಬಗ್ಗೆ ಮೂಡಿರೋ ಹಲವು ಅನುಮಾನಗಳು ಶುರುವಾಗಿದೆ.ಯಾರೊಂದಿಗೆ ಬಂದಿದ್ದ, ಕಟ್ಟಡದ ಮೇಲೆ ಯಾಕೆ ಹೋಗಿದ್ದ ಅನ್ನೋದ್ರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ.ಸದ್ಯ ಯುಡಿಆರ್ ಪ್ರಕರಣವನ್ನ ಪೊಲೀಸರು ದಾಖಲಿಸಿದ್ದು,ಸುಬ್ರಮಣ್ಯನಗರ ಪೊಲೀಸರಿಂದ ತನಿಖೆ ಮುಂದುವರೆದಿದೆ.