Publish Date: Thu, 29 Dec 2022 (13:44 IST)
Updated Date: Thu, 29 Dec 2022 (13:49 IST)
ಇಂದು ನಗರದಲ್ಲಿ ಆಟೋ ಚಾಲಕರು ಮುಷ್ಕರ ನಡೆಸುತ್ತಿದ್ದು, ಫ್ರೀಡಂ ಪಾರ್ಕ್ ನಲ್ಲಿ ಆಟೋ ಚಾಲಕರು ಜಮಾಯಿಸಿದ್ದು, 21 ಕ್ಕೂ ಹೆಚ್ಚು ಆಟೋ ಚಾಲಕರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು,ಫ್ರೀಡಂಪಾರ್ಕ್ ಸಮಾವೇಶ ಬಳಿಕ ಆಟೋ ಚಾಲಕರು ಜಾಥಾ ನಡೆಸಲಿದ್ದಾರೆ.ಕಾಲ್ನಡಿಗೆ ಮೂಲಕ ವಿಧಾನಸೌಧಕ್ಕೆ ತೆರಳಲು ಪ್ಲಾನ್ ನಡೆಸಿದ್ದು,ಆಟೋ ರ್ಯಾಲಿಗೆ ಸದ್ಯ ಅನುಮತಿ ಸಿಕ್ಕಿಲ್ಲ.ಈ ಹಿನ್ನೆಲೆ ಕಾಲ್ನಡಿಗೆ ಮೂಲಕ ತೆರಳಲು ತಯಾರಿ ಮಾಡಿಕೊಂಡಿದ್ದಾರೆ.
ಸದ್ಯ ಫ್ರೀಡಂಪಾರ್ಕ್ ಬಳಿ ಆಟೋ ಚಾಲಕರು ಜಮಾಯಿಸಿದ್ದು,ಆಟೋ ಚಾಲಕರಿಗೆ ಪೊಲೀಸರಿಂದ ತಡೆಹಿಡಿಯಲಾಗಿದೆ.ರಸ್ತೆಯಲ್ಲಿ ಆಟೋಗಳನ್ನ ತಡೆದಿದ್ದಕ್ಕೆ ಚಾಲಕರ ಕಿಡಿಕಾರಿದ್ದು,ಪ್ರತಿಭಟನಾ ಸ್ಥಳದಲ್ಲಿ ಪೊಲೀಸರು,ಆಟೋ ಯೂನಿಯನ್ ಮುಖಂಡರ ಮಾತುಕತೆ ನಡೆದಿದೆ.ಆಟೋ ಚಾಲಕರಿಗೆ ಪಾರ್ಕಿಂಗ್ ಜಾಗ ನಿಗದಿಯಾಗಿದ್ದು,ಪಾರ್ಕಿಂಗ್ ಜಾಗದ ಬಗ್ಗೆ ಪೊಲೀಸರಿಂದ ಮಾಹಿತಿ ತಗೊಂಡಿದ್ದಾರೆ.ಇನ್ನು ಆಟೋ ಚಾಲಕರಿಗೆ ಪೊಲೀಸರು ತಿಳಿಹೇಳಿದ್ದಾರೆ.ಅವಕಾಶ ನೀಡದಿದ್ದಕ್ಕೆ ಪೊಲೀಸರ ವಿರುದ್ಧ ಆಟೋ ಚಾಲಕರು ಕಿಡಿಕಾರಿದ್ದಾರೆ.