Publish Date: Thu, 29 Dec 2022 (16:16 IST)
Updated Date: Thu, 29 Dec 2022 (16:22 IST)
ಮೊಬೈಲ್ ಕದ್ದು IMEI ನಂಬರ್ ಬದಲಿಸಿ ಮಾರಾಟ ಮಾಡುತ್ತಿದ್ದ ಆರೋಪಿಗಳು ಅಂದರ್ ಆಗಿದ್ದಾರೆ. ಬೆಂಗಳೂರಿನ ಆಶೋಕ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಜೀತ್ ಅಲಿಯಾಸ್ ಬ್ರೂಟ್, ಗೋಪಿ, ಶಾಹೀಲ್ ಬಂಧಿತ ಆರೋಪಿಗಳಾಗಿದ್ದಾರೆ. ಅಜಿತ್ ಹಾಗೂ ಗೋಪಿ ಬಸ್ಗಳಲ್ಲಿ ಮೊಬೈಲ್ ಕದಿಯುತ್ತಿದ್ದರು. ಶಾಹೀಲ್ ಕದ್ದ ಮೊಬೈಲ್ನ IMEI ನಂಬರ್ ಬದಲಿಸಿ ಕೊಡುತ್ತಿದ್ದನಂತೆ. IMEI ನಂಬರ್ ಸ್ವಾಪ್ ಮಾಡಲು ಬಳಸುತ್ತಿದ್ದ ಕಂಪ್ಯೂಟರ್ ಅನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಆಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.