Select Your Language

Notifications

webdunia
webdunia
webdunia
webdunia

ಆಕ್ರಮ ಗಣಿಕಾರಿಕೆಯ ವಿರುದ್ಧ ಮಾತನಾಡಿದ ಸಿದ್ದು

bangalore
bangalore , ಗುರುವಾರ, 15 ಜುಲೈ 2021 (21:01 IST)
ಇಂದು ಚಾಮರಾಜ ಪೇಟೆಗೆ  ಕಾರ್ಯಕ್ರಮಕ್ಕೆಂದು  ಆಗಮಿಸಿದ ಸಿದ್ದರಾಮಯ್ಯನವರು ಸುದ್ದಿಗೋಷ್ಟಿಯಲ್ಲಿ  ಮಾತನಾಡಿದರು. ಮುಂದೆ  ನಡೆಯಬೇಕಿದ್ದ ವಿಧಾನ ಸಬೆ  ಅದಿವೇಶನದಲ್ಲಿ  
ಅಕ್ರಮ ಗಣಿಗಾರಿಕೆ ವಿಚಾರವನ್ನು  ಪ್ರಸ್ತಾಪಿಸುತ್ತೇನೆ.
ಆದರೆ ರಾಜ್ಯ ಸರ್ಕಾರ ಅಧಿವೇಶನ ನಡೆಸಿಲ್ಲ. ಹೀಗಾಗಿ ಅಧಿವೇಶನ ನಡೆಸಿ ಎಂದು ಪತ್ರ ಬರೆದಿದ್ದೇನೆ.  ಕನಿಷ್ಠ 60 ದಿನ ಅಧಿವೇಶನ ನಡೆಸಲೇಬೇಕು. ಮೊದಲು ಭ್ರಷ್ಟಾಚಾರ, ಕೊರೋನಾ ವೈಫಲ್ಯ ಹಾಗೂ ಅಕ್ರಮ ಗಣಿಗಾರಿಕೆ ಬಗ್ಗೆ ಚರ್ಚೆ ನಡೆಸಬೇಕಿದೆ. ಈಗ ರಾಕೇಶ್ ಪಾಪಣ್ಣ ಸಿದ್ದರಾಮಯ್ಯ ಆಪ್ತ ಎಂಬ ಆರೋಪವೂ ಕೇಳಿ ಬರ್ತಿದೆ. ಇದಕ್ಕೆ ಪ್ರತಿಯಾಗಿ ಯಾರು ಏನು ಬೇಕಾದರು ಹೇಳಿ ಕೊಳ್ಳಬಹುದು  ಆದರೆ ಅದೆಲ್ಲ ಬಹಳ ದಿನ  ನಡೆಯಲ್ಲ ಎಂದು  ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಶ್ರೀ ರಾಮುಲು ಜಗನಾಥ್ ಭವನಕ್ಕೆ ಭೇಟಿ