Select Your Language

Notifications

webdunia
webdunia
webdunia
webdunia

ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಶ್ರೀ ರಾಮುಲು ಜಗನಾಥ್ ಭವನಕ್ಕೆ ಭೇಟಿ

bangalore
bangalore , ಗುರುವಾರ, 15 ಜುಲೈ 2021 (20:58 IST)
ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ಬಿ. ಶ್ರೀ ರಾಮಲು ಅವರು ಇಂದು ಬಿಜೆಪಿ ಕಛೇರಿಯ ಜಗನ್ನಾತ ಭವನಕ್ಕೆ ಭೇಟಿ ನೀಡಿದ್ರು. ಅಲ್ಲದೇ ಸುದ್ದಿಗೋಷ್ಟಿಯಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿ, ಇದರಲ್ಲಿ ಯವುದೇ ರೀತಿಯ ನನ್ನ ವೈಯಕ್ತಿಕ ಅಭಿಪ್ರಾಯ ಇಲ್ಲ. ಪಕ್ಷದ ಅಭಿಪ್ರಾಯವೇ ನನ್ನ ಅಭಿಪ್ರಾಯ. ನಮ್ಮ ಪರವಾಗಿ ನಾಯಕ ಯಡಿಯೂರಪ್ಪ ಇದಾರೆ. ಅವರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಆದ್ರೆ ಜನಸಂಖ್ಯಾ ನಿಯಂತ್ರಣ ಕಾನೂನು ಬಗ್ಗೆ ಸಿಟಿ ರವಿ ಹೇಳಿಕೆ ಬಗ್ಗೆ ಮಾಹಿತಿ ಇಲ್ಲ ನಾಯಕತ್ವ ಬಗ್ಗೆ ಹೈಕಮಾಂಡ್ ತೀರ್ಮಾನ ತಗೊಳ್ಳುತ್ತೆ. ನಾಯಕತ್ವ ಬದಲಾವಣೆ ಬಗ್ಗೆ ಮಾತಾಡುವ ಅಧಿಕಾರವನ್ನು ಪಕ್ಷ ನನಗೆ ಕೊಟ್ಟಿಲ್ಲ. ದೆಹಲಿಗೆ ಹೋಗುವ ಬಗ್ಗೆ ಸಿಎಂ ಅವರೇ ಮಾತಾಡ್ತಾರೆ. ಈ ವಿಚಾರವಾಗಿ  ಹಿಂದೆ ನಮ್ಮ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ರು ಹಾಗೂ ಕೋರ್ ಕಮಿಟಿ ಮೀಟಿಂಗ್ ನಲ್ಲಿ ನಿರ್ಣಯವೂ ಆಗಿತ್ತು. ಇನ್ನು ನಾಳೆ ಸಿಎಂ ದೆಹಲಿಗೆ  ಭೇಟಿ ನೀಡುವ ವಿಚಾರವಾಗಿ ಯಾವುದೇ ರೀತಿಯ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೈಕಮಾಂಡ್ ಭೇಟಿಗೆ ದೆಹಲಿಗೆ ಪ್ರಯಾಣಿಸಿದ ಸಿಎಂ ಯಡಿಯೂರಪ್ಪ