Select Your Language

Notifications

webdunia
webdunia
webdunia
webdunia

ಜನತೆ ಸಂಕಷ್ಟದಲ್ಲಿರುವಾಗ ಊಟಿಯಲ್ಲಿ ಸಿದ್ದರಾಯಯ್ಯ ಮೋಜು ಪಾರ್ಟಿ: ಆರ್‌. ಅಶೋಕ ವ್ಯಂಗ್ಯ

R Ashok

Sampriya

ಬೆಂಗಳೂರು , ಶುಕ್ರವಾರ, 10 ಮೇ 2024 (14:31 IST)
ಬೆಂಗಳೂರು: ಕರ್ನಾಟಕದಲ್ಲಿ ಜನತೆ ಬರದ ಸಂಕಷ್ಟದಲ್ಲಿ ಮುಳುಗಿರುವಾಗ ಮುಖ್ಯಮಂತ್ರಿ ಸಿದ್ದರಾಯಯ್ಯ ಊಟಿಯಲ್ಲಿ ಪಾರ್ಟಿ ಮಾಡಿಕೊಂಡು ಮೋಜು ಮಾಡುತ್ತಿದ್ದಾರೆ. ಅವರಿಗೆ ಕನ್ನಡಿಗರ ಬಗ್ಗೆ ಬದ್ಧತೆ ಇದೆಯೇ? ಎಂದು  ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಕಿಡಿಕಾರಿದ್ದಾರೆ.

ನಿಮ್ಮ ಸರ್ಕಾರದ ಎಡವಟ್ಟುಗಳು, ದುರಾಡಳಿತ ಮತ್ತು ಬೇಜವಾಬ್ದಾರಿಯಿಂದ ರಾಜ್ಯದ ಜನತೆ ಅನುಭವಿಸುತ್ತಿರುವ ಸಂಕಷ್ಟಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಮಜಾ ಮಾಡಿಕೊಂಡು ಪ್ರಧಾನಿ ಮೋದಿಯವರ ಬಗ್ಗೆ ಅನಾವಶ್ಯಕ ಟೀಕೆಗಳ ಮೂಲಕ ರಾಜಕೀಯ ಮಾಡುತ್ತಿರುವ ನಿಮಗೆ ನಾಚಿಗೆ ಆಗಬೇಕು ಎಂದು ಮುಖ್ಯಮಂತ್ರಿ ವಿರುದ್ಧ ಎಕ್ಸ್‌ನಲ್ಲಿ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ರೈತರಿಗೆ ಬರ ಪರಿಹಾರ ನೀಡಲು ₹3,454 ಕೋಟಿ ಬಿಡುಗಡೆ ಮಾಡಿ ಎರಡು ವಾರ ಕಳೆದರೂ ಒಂದು ನಯಾಪೈಸೆ ಬರ ಪರಿಹಾರ ರೈತರ ಕೈ ಸೇರಿಲ್ಲ. ಹೈನುಗಾರರಿಗೆ ಏಳು ತಿಂಗಳಿಂದ ಬಾಕಿ ಇರುವ ₹700 ಕೋಟಿ ಇನ್ನೂ ಪಾವತಿ ಮಾಡಿಲ್ಲ. ತೆಂಗು ಬೆಳೆಗಾರರ ನಷ್ಟದ ಬಗ್ಗೆ ಅಧ್ಯಯನ ನಡೆಸಲು ಇನ್ನೂ ಸಮಿತಿ ರಚಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣದ ಜಾಲ ದಿನೇ ದಿನೇ ಹೆಚ್ಚಾಗುತ್ತಿದ್ದರೂ ಇನ್ನೂ ಎಸ್‌ಐಟಿ ರಚನೆ ಮಾಡಿಲ್ಲ. ಅಂಗನವಾಡಿಗಳಲ್ಲಿ ಊಟ, ಆರೈಕೆ ಸರಿ ಇಲ್ಲದೆ 2 ಲಕ್ಷಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಕಡಿಮೆ ಆಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆಂಬುಲೆನ್ಸ್‌ ಚಾಲಕರಿಗೆ ಮೂರು ತಿಂಗಳಿಂದ ವೇತನ ಪಾವತಿ ಆಗಿಲ್ಲ. ಸಿಇಟಿ ಪ್ರಶ್ನೆ ಪತ್ರಿಕೆ ಎಡವಟ್ಟಿನಿಂದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದ್ದರೂ ತಮಗೆ ಯಾವುದೇ ಚಿಂತೆ ಇಲ್ಲ. ಒಂದು ವಾರದೊಳಗೆ ಬಾಕಿ ಬಿಲ್‌ ಪಾವತಿ ಆಗದಿದ್ದರೆ ಕಾಮಗಾರಿ ಸ್ಥಗಿತಗೊಳಿಸುತ್ತೇವೆ ಎಂದು ಗುತ್ತಿಗೆದಾರರ ಸಂಘದ ಗಡುವು ನೀಡಿದ್ದರೂ ನಿಮ್ಮ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ ಎಂದು ಆರೋಪಿಸಿರುವ ಅಶೋಕ್‌, ಸರ್ಕಾರದ ದುರಾಡಳಿತಕ್ಕೆ ಇಲ್ಲಿದೆ ಸಾಕ್ಷಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನರೇಂದ್ರ ದಾಭೋಲ್ಕರ್ ಯಾರು? ಅವರ ಹತ್ಯೆಯ ಕಾರಣಗಳೇನು ನೋಡಿ