Publish Date: Fri, 19 Oct 2018 (15:21 IST)
Updated Date: Fri, 19 Oct 2018 (15:23 IST)
ಬೆಂಗಳೂರು: ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದ ಮೇಲೆಯೂ ಪ್ರತಿಭಟನಾಕಾರರು ಪ್ರತಿಭಟಿಸುತ್ತಿರುವ ಹಿನ್ನಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
‘ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶದ ವಿವಾದದ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಸಂವಿಧಾನವನ್ನು ಒಪ್ಪಿಕೊಂಡಿರುವ ನಾವೆಲ್ಲರೂ ತಲೆಬಾಗಬೇಕು’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಈ ವಿಚಾರದಲ್ಲಿ ಕಾಂಗ್ರೆಸ್ ಜಾಣತನ ಪ್ರದರ್ಶಿಸಿದ್ದು, ಇದುವರೆಗೆ ಸ್ಪಷ್ಟವಾಗಿ ತನ್ನ ನಿಲುವು ವ್ಯಕ್ತಪಡಿಸಿಲ್ಲ. ಅತ್ತ ಭಕ್ತರನ್ನೂ ಎದುರು ಹಾಕಿಕೊಳ್ಳದೇ ಇತ್ತ ಮಹಿಳೆಯರ ಪ್ರವೇಶಕ್ಕೆ ಪರವಾಗಿ ಇರುವವರನ್ನೂ ನೇರವಾಗಿ ಬೆಂಬಲಿಸುವ ಮಾತನಾಡದೇ ಜಾಣತನ ಪ್ರದರ್ಶಿಸಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.