Publish Date: Mon, 18 Nov 2019 (10:44 IST)
Updated Date: Mon, 18 Nov 2019 (10:45 IST)
ಬಾಗಲಕೋಟೆ: ಮೋದಿ ಗಾಳಿಗೆ ಕೈ, ಜೆಡಿಎಸ್ ನವರು ಓಡೋಡಿ ಬರ್ತಿದ್ದಾರೆ. ಅವರನ್ನ ತಡೆಯಲು ನಮ್ಮ ಕೈಯಲ್ಲಿ ಆಗುತ್ತಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಬಿಜೆಪಿಗೆ ಬಂದವರನ್ನು ನಾವು ಸ್ವಾಗತ ಮಾಡುತ್ತಿದ್ದೇವೆ, ಆದರೆ ಅವರನ್ನ ಎಲ್ಲಿಡಬೇಕೋ ಅಲ್ಲಿಯೇ ಇಡುತ್ತಿದ್ದೇವೆ. ಯಾರ್ಯಾರು ಬೇಕೋ ಅವರನ್ನ ಬಳಸಿಕೊಳ್ಳುತ್ತೇವೆ. ಯಾರಿಗೆ ಏನು ಸ್ಥಾನಮಾನ ಕೊಡಬೇಕೋ ಕೊಡುತ್ತೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಕಾಂಗ್ರೆಸ್ ನಿರ್ನಾಮವಾಗುವವರೆಗೆ ಸಿದ್ದರಾಮಯ್ಯ ಬಿಡಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಈಗ 2 ಗುಂಪುಗಳಾಗಿವೆ. ಒಂದು ಡಿಕೆಶಿ ಗುಂಪು, ಮತ್ತೊಂದು ಸಿದ್ದರಾಮಯ್ಯ ಗುಂಪು. ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ಒಡೆಯುತ್ತಿದ್ದಾರೆ. ಒಡೆಯುವುದರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನಿಸ್ಸೀಮ. ಬಿಜೆಪಿ ಬಗ್ಗೆ ಮಾತಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ ಎಂದು ಅವರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.