Select Your Language

Notifications

webdunia
webdunia
webdunia
Saturday, 12 April 2025
webdunia

2011 ರ ವಿಶ್ವಕಪ್ ನಲ್ಲಿ ಶತಕ ವಂಚಿತನಾಗಲು ಧೋನಿ ಕಾರಣವಾಗಿದ್ದು ಹೇಗೆ ಎಂದು ವಿವರಿಸಿದ ಗೌತಮ್ ಗಂಭೀರ್

ಗೌತಮ್ ಗಂಭೀರ್
ನವದೆಹಲಿ , ಸೋಮವಾರ, 18 ನವೆಂಬರ್ 2019 (09:23 IST)
ನವದೆಹಲಿ: ಸದಾ ತಮ್ಮ ನೇರ ಮಾತಿನ ಮೂಲಕ ಸುದ್ದಿಯಾಗುವ ಮಾಜಿ ಕ್ರಿಕೆಟಿಗ, ಹಾಲಿ ಸಂಸದ ಗೌತಮ್ ಗಂಭೀರ್ 2011 ರ ವಿಶ್ವಕಪ್ ನಲ್ಲಿ ತಾವು ಶತಕದ ಹೊಸ್ತಿಲಲ್ಲಿ ಎಡವಲು ಧೋನಿ ಕಾರಣವಾಗಿದ್ದು ಹೇಗೆ ಎಂದು ವಿವರಿಸಿದ್ದಾರೆ.


2011 ವಿಶ್ವಕಪ್ ಫೈನಲ್ ಗೆಲುವಿನ ರೂವಾರಿಯಾಗಿದ್ದ ಗಂಭೀರ್ ಆ ಪಂದ್ಯದಲ್ಲಿ 97 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ದರು. 31 ಕ್ಕೆ 2 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್ ಗೆ ಬಂದಿದ್ದ ಗಂಭೀರ್ ತಮ್ಮ ಅಮೋಘ ಆಟದಿಂದ ತಂಡವನ್ನು ಐತಿಹಾಸಿಕ ಗೆಲುವಿನತ್ತ ಕರೆದೊಯ್ದಿದ್ದರು.

ಆ ಪಂದ್ಯದಲ್ಲಿ ತಾವು 97 ರನ್ ಗೆ ಔಟಾಗಿದ್ದು ಹೇಗೆ ಎಂಬುದನ್ನು ಗಂಭೀರ್ ವಿವರಿಸಿದ್ದಾರೆ. ’97 ರನ್ ಗಳವರೆಗೆ ನನ್ನ ಗಮನ ಕೇವಲ ಶ್ರೀಲಂಕಾ ಟಾರ್ಗೆಟ್ ಚೇಸ್ ಮಾಡುವುದಷ್ಟೇ ಆಗಿತ್ತು. ನನ್ನ ವೈಯಕ್ತಿಕ ರನ್ ಕಡೆಗೆ ಗಮನವನ್ನೇ ಕೊಟ್ಟಿರಲಿಲ್ಲ. ಆದರೆ 97 ರನ್ ಗಳಾಗಿದ್ದಾಗ ಇನ್ನೊಂದು ತುದಿಯಲ್ಲಿದ್ದ ಧೋನಿ ನನ್ನ ಬಳಿ ಬಂದು ಇನ್ನು ಮೂರು ರನ್ ಬೇಕು. ಅದನ್ನು ಪೂರ್ತಿ ಮಾಡಿ ಶತಕ ಬಾರಿಸು ಎಂದಿದ್ದರು. ಅಲ್ಲಿಂದ ಇದ್ದಕ್ಕಿದ್ದಂತೆ ನನ್ನ ಗಮನ ಶತಕದತ್ತ ಹರಿಯಿತು. ಇದರಿಂದ ಏಕಾಗ್ರತೆ ಕಳೆದುಕೊಂಡು ಔಟಾದೆ’ ಎಂದು ಗಂಭೀರ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೆಸ್ಟ್ ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಕ್ಕೆ ಟೀಂ ಇಂಡಿಯಾದಲ್ಲಿ ಮಯಾಂಕ್ ಅಗರ್ವಾಲ್ ಗೆ ಭರ್ಜರಿ ಬಡ್ತಿ?!