ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಲಿರುವ ‘ಕಬ್ಜ’ ಸಿನಿಮಾಗೆ ಇಂದು ಅದ್ಧೂರಿಯಾಗಿ ಮುಹೂರ್ತ ಕಾರ್ಯಕ್ರಮ ನೆರವೇರಲಿದೆ.
									
										
								
																	
ಈಗಾಗಲೇ ಕಬ್ಜ ಸಿನಿಮಾದ ಫೋಟೋ ಶೂಟ್ ನಡೆಸಲಾಗಿದ್ದು, ಪಕ್ಕಾ 80 ರ ದಶಕದ ಗ್ಯಾಂಗ್ ಸ್ಟರ್ ವೇಷದಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದಾರೆ.
									
			
			 
 			
 
 			
			                     
							
							
			        							
								
																	ಐ ಲವ್ ಯೂ ಸಿನಿಮಾ ನಿರ್ದೇಶಿಸಿದ ಆರ್ ಚಂದ್ರು ಕಬ್ಜ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಇದು ಒಟ್ಟು 7 ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಎಲ್ಲಾ ಭಾಷೆಗಳ ನಿರ್ಮಾಣ ಸಂಸ್ಥೆಯ ಪ್ರತಿನಿಧಿಗಳು, ಸಿನಿಮಾ ದಿಗ್ಗಜರು ಈ ಮುಹೂರ್ತ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾವಿದು.