Publish Date: Sat, 16 Nov 2019 (08:56 IST)
Updated Date: Sat, 16 Nov 2019 (08:57 IST)
ಬೆಂಗಳೂರು: ನಿರ್ದೇಶಕ ರಿಷಬ್ ಶೆಟ್ಟಿ ಸಿನಿಮಾಗಳಲ್ಲಿ ತಮ್ಮ ಕ್ರಿಯಾತ್ಮಕತೆ ಪ್ರದರ್ಶಿಸಿ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಇದೀಗ ತಮ್ಮ ವೈಯಕ್ತಿಕ ಜೀವನದಲ್ಲೂ ಇದೇ ರೀತಿ ಪ್ರತಿಭೆ ಪ್ರದರ್ಶನ ಮಾಡಿದ್ದಾರೆ.
ರಿಷಬ್ ದಂಪತಿಗೆ ಇತ್ತೀಚೆಗಷ್ಟೇ ಗಂಡು ಮಗುವಾಗಿತ್ತು. ಈ ಬಗ್ಗೆ ರಿಷಬ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖುಷಿಯಿಂದಲೇ ಹಂಚಿಕೊಂಡಿದ್ದರು. ಇದೀಗ ರಿಷಬ್ ತಮ್ಮ ಮಗನ ಹೆಸರನ್ನು ಸಿನಿಮಾ ಶೈಲಿಯಲ್ಲೇ ಬಹಿರಂಗಪಡಿಸಿದ್ದಾರೆ.
ಡಿಟೆಕ್ಟಿವ್ ದಿವಾಕರ್ ಸಿನಿಮಾ ಶೈಲಿಯಲ್ಲಿ ಕಾಣಿಸಿಕೊಂಡಿರುವ ರಿಷಬ್ ತಮ್ಮ ಪುತ್ರನ ಹೆಸರು ರನ್ವಿತ್ ಶೆಟ್ಟಿ ಎಂದು ಬಹಿರಂಗಪಡಿಸಿದ್ದಾರೆ. ಒಂದು ರೀತಿ ಸಿನಿಮಾ ಟೀಸರ್ ರೀತಿಯಲ್ಲಿ ಪುತ್ರನ ಫೋಟೋ ಜತೆಗೆ ಈತ ರನ್ವಿತ್ ಶೆಟ್ಟಿ ಎಂದು ಹೆಸರನ್ನು ಕ್ರಿಯೇಟಿವ್ ಆಗಿ ರಿಷಬ್ ಹೊರಹಾಕಿದ್ದಾರೆ.