Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಪುನೀತ್ ನಿರ್ಮಾಣದ ಮಾಯಾಬಜಾರ್ ನಲ್ಲಿ ನೋಟು ಅಮಾನ್ಯದ ಕತೆ?!

webdunia
ಶನಿವಾರ, 16 ನವೆಂಬರ್ 2019 (08:47 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ತಮ್ಮ ಹೋಂ ಬ್ಯಾನರ್ ನಲ್ಲಿ ನಿರ್ಮಿಸಿರುವ ಮಾಯಾಬಜಾರ್ 2016 ಸಿನಿಮಾದ ಟೀಸರ್ ನಿನ್ನೆ ಸಂಜೆ ಬಿಡುಗಡೆಯಾಗಿದೆ.


ಈ ಟೀಸರ್ ನೋಡಿ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರೀ ಲೈಕ್ಸ್ ಪಡೆದಿದೆ. ವಸಿಷ್ಠ ಸಿಂಹ, ರಾಜ್ ಬಿ ಶೆಟ್ಟಿ, ಪ್ರಕಾಶ್ ರಾಜ್, ಸುಧಾರಾಣಿ ಮತ್ತು ಚೈತ್ರಾ ರಾವ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ನಾಯಕ-ನಾಯಕಿ ಎಂದೆಲ್ಲಾ ಯಾರೂ ಇಲ್ಲ. ಕತೆಯೇ ಹೀರೋ.

ಈ ಟೀಸರ್ ನೋಡುತ್ತಿದ್ದರೆ ಇದು ನೋಟು ಅಮಾನ್ಯೀಕರಣದ ಸುತ್ತ ಹಣೆಯಲಾದ ಕತೆಯೆಂಬಂತೆ ತೋರುತ್ತಿದೆ. ಟೀಸರ್ ನ  ಆರಂಭದಲ್ಲೇ ಪ್ರಧಾನಿ ಮೋದಿ ನೋಟು ನಿಷೇಧ ಮಾಡುತ್ತಿರುವ ಬಗ್ಗೆ ಅಂದು ಮಾಡಿದ್ದ ಭಾಷಣದ ತುಣುಕು ಕೇಳಿಬರುತ್ತದೆ. ಜತೆಗೆ ಪೋಸ್ಟರ್ ನಲ್ಲಿರುವ ಎಟಿಎಂ ಮಿಷನ್ ನೋಡಿದರೆ ಇದು ನೋಟು ಅಮಾನ್ಯೀಕರಣದ ಸುತ್ತ ಹಣೆಯಲಾದ ಕತೆ ಎನಿಸುತ್ತದೆ. ಡಿಸೆಂಬರ್ ನಲ್ಲಿ ಈ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ: ಈ ವಾರ ಮನೆಯಿಂದ ಹೊರಹೋಗುವ ಆ ಸ್ಪರ್ಧಿ ಯಾರು ಗೊತ್ತಾ?