Select Your Language

Notifications

webdunia
webdunia
webdunia
webdunia

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸಲ್ಲ : ಯಡಿಯೂರಪ್ಪ

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸಲ್ಲ : ಯಡಿಯೂರಪ್ಪ
ಬೆಳಗಾವಿ , ಸೋಮವಾರ, 23 ಜನವರಿ 2023 (17:19 IST)
ಬೆಳಗಾವಿ : ಯಾವುದೇ ಕಾರಣಕ್ಕೂ ಕೋಲಾರದಿಂದ ಸಿದ್ದರಾಮಯ್ಯ ನಿಲ್ಲುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಭವಿಷ್ಯ ಹೇಳುತ್ತಿಲ್ಲ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಿಲ್ಲ. ಡ್ರಾಮಾ ಮಾಡುತ್ತಿದ್ದಾರೆ. ಮೈಸೂರಿಗೆ ಬರಲು ಪ್ರಯತ್ನ ಮಾಡುತ್ತಿದ್ದಾರೆ.

ಕೋಲಾರದಲ್ಲಿ ನಿಂತುಕೊಂಡ್ರೇ ಅವರು ಮನೆಗೆ ಹೋಗುವುದು ನಿಶ್ಚಿತ ಅಂತಾ ಗೊತ್ತಿದೆ. ಆದ್ರೂ ಸುಮ್ಮನೆ ರಾಜಕೀಯ ನಾಟಕ ಮಾಡುತ್ತಿದ್ದಾರೆ ಎಂದು ಹೇಳಿದರು.

ನನ್ನ ಪ್ರಕಾರ ಅವರು ಕೋಲಾರದಲ್ಲಿ ನಿಲ್ಲುವುದಿಲ್ಲ, ಮೈಸೂರಿಗೆ ಹೋಗಬಹುದು. ಅದಾದ ಬಳಿಕ ಮುಂದಿನ ಸ್ಟ್ಯಾಟರ್ಜಿ ಮಾಡಬೇಕು ಮಾಡುತ್ತೇವೆ. ಸಿದ್ದರಾಮಯ್ಯ ಎರಡು ಕಡೆಯಾದ್ರೂ ಸ್ಪರ್ಧೆ ಮಾಡಲಿ, ಮೂರು ಕಡೆಯಾದ್ರೂ ಮಾಡಲಿ ಮನೆಗೆ ಹೋಗುವುದು ನಿಶ್ಚಿತ ಎಂದು ಭವಿಷ್ಯ ನುಡಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಲು ಗ್ರೀನ್ ಸಿಗ್ನಲ್