ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಡುವೆ ಮುಸುಕಿನ ಗುದ್ದಾಟ ಮುಂದುವರಿದಿದೆಯಾ?
	 
	ಇಂಥದ್ದೊಂದು ಅನುಮಾನ ಈಗ ವ್ಯಕ್ತವಾಗತೊಡಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ, ವಿಪಕ್ಷ ಹಾಗೂ ಸಿಎಲ್ ಪಿ ಸ್ಥಾನಕ್ಕೆ ಹೊಸ ನೇಮಕ ಮಾಡಬೇಕಾ? ಕೆಪಿಸಿಸಿಗೆ ಬೇರೆ ವಿಪಕ್ಷ ಮತ್ತು ಸಿಎಲ್ ಪಿಗೆ ಬೇರೆ ಬೇರೆಯವರನ್ನು ನೇಮಕ ಮಾಡಬೇಕಾ ಅನ್ನೋದು ಚರ್ಚೆಯಾಗುತ್ತಿದೆ. 
	ವಿಪಕ್ಷ ಹಾಗೂ ಸಿಎಲ್ ಪಿ ಪ್ರತ್ಯೇಕಿಸೋದಾದ್ರೆ ರಾಜೀನಾಮೆ ಅಂಗೀಕಾರ ಮಾಡಿ ಅಂತ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. 
	ವಿಪಕ್ಷ ಮತ್ತು ಸಿಎಲ್ ಪಿ ಎರಡೂ ಸ್ಥಾನಗಳಲ್ಲಿ ಮುಂದುವರಿಯೋಕೆ ಸಿದ್ದರಾಮಯ್ಯ ಒಲವು ತೋರಿದ್ದಾರೆ ಎನ್ನಲಾಗ್ತಿದೆ. 
	ಹೈಕಾಂಡ್ ನಿರ್ಧಾರ ತೆಗೆದುಕೊಂಡ ಬಳಿಕ ಸಿದ್ದರಾಮಯ್ಯ ಯಾವ ದಾರಿ ತುಳಿಯಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.