ಸಿದ್ದರಾಮಯ್ಯ, ಡಿಕೆಶಿ ನಡುವಿನ ಪವರ್ ವಾರ್ ಮತ್ತೊಂದು ಹಂತಕ್ಕೆ: ಸಿಎಂ ಹೊಸ ಟ್ವೀಟ್ ನಲ್ಲಿ ಏನಿದೆ

Krishnaveni K
ಗುರುವಾರ, 27 ನವೆಂಬರ್ 2025 (20:19 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ನಡೆಯುತ್ತಿದ್ದ ಅಧಿಕಾರ ಹಂಚಿಕೆ ಫೈಟ್ ಈಗ ಮತ್ತೊಂದು ಹಂತಕ್ಕೆ ಹೋಗಿದೆ. ಡಿಕೆಶಿ ಟ್ವೀಟ್ ಗೆ ಪ್ರತಿಯಾಗಿ ಈಗ ಸಿದ್ದರಾಮಯ್ಯ ಹೊಸ ಟ್ವೀಟ್ ಮಾಡಿದ್ದಾರೆ.

ಇಂದು ಬೆಳಿಗ್ಗೆಯೇ ಡಿಸಿಎಂ ಡಿಕೆ ಶಿವಕುಮಾರ್ ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಇದು ಸಿದ್ದರಾಮಯ್ಯ ಬಗ್ಗೆಯೇ ಪರೋಕ್ಷವಾಗಿ ಕುಟುಕಿರಬಹುದೇ ಎಂದು ಹಲವರು ವಿಶ್ಲೇಷಿಸಿದ್ದರು.

ಇದರ ಬೆನ್ನಲ್ಲೇ ಇದೀಗ ಸಂಜೆ  ವೇಳೆಗೆ ಸಿಎಂ ಸಿದ್ದರಾಮಯ್ಯ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದು ಇದು ಡಿಕೆಶಿಗೆ ಕೊಟ್ಟ ಕೌಂಟರ್ ಇರಬಹುದೇ ಎಂದು ವಿಶ್ಲೇಷಿಸಲಾಗುತ್ತಿದೆ. ನಮ್ಮ ಭರವಸೆ ಕರ್ನಾಟಕಕ್ಕೆ ಕೇವಲ ಸ್ಲೋಗನ್ ಅಲ್ಲ, ಇದುವೇ ನಮ್ಮ ಜಗತ್ತು ಎಂಬ ಅರ್ಥ ಬರುವ ಇಂಗ್ಲಿಷ್ ಸಾಲೊಂದನ್ನು ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ.

ಈ ಮೂಲಕ ಈಗ ಸಿದ್ದು-ಡಿಕೆಶಿ ಕುರ್ಚಿ ಫೈಟ್ ಸೋಷಿಯಲ್ ಮೀಡಿಯಾವರೆಗೂ ಬಂತೇ ಎಂಬ ಅನುಮಾನ ಮೂಡಿದೆ. ಕುರ್ಚಿ ಕದನ ಹೈಕಮಾಂಡ್ ಅಂಗಳದಲ್ಲಿದ್ದು ಕ್ಲೈಮ್ಯಾಕ್ಸ್ ಹಂತದಲ್ಲೇ ಇಬ್ಬರ ನಡುವಿನ ಸೋಷಿಯಲ್ ಮೀಡಿಯಾ ವಾರ್ ಎಲ್ಲರ ಗಮನ ಸೆಳೆಯುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮ ನಾಯಕನಿದ್ದರೆ ಸಮುದಾಯಕ್ಕೆ ಬಲ, ಸಿದ್ದು ಪರ ಪುತ್ರ ಯತೀಂದ್ರ ಅಬ್ಬರದ ಭಾಷಣ

ಗೋವಾದಲ್ಲಿ ವಿಶ್ವದ ಅತಿ ಎತ್ತರದ ರಾಮನ ಪ್ರತಿಮೆ ಅನಾವರಣಗೊಳಿಸಿದ ಮೋದಿ

ಶಕ್ತಿ, ಗೃಹಲಕ್ಷ್ಮಿ ಯೋಜನೆಯಿಂದ ತಲಾ ಆದಾಯದಲ್ಲಿ ದೇಶದಲ್ಲಿಯೇ ರಾಜ್ಯ ಮೊದಲು: ಸಿದ್ದರಾಮಯ್ಯ

ಸಿದ್ದರಾಮಯ್ಯ ಸಂಕಲ್ಪನೂ ಈಡೇರುತ್ತೆ, ಡಿಕೆಶಿ ಸಿಎಂ ಆಗುತ್ತಾರೆ: ಜನಾರ್ದನ ರೆಡ್ಡಿ

ಇದಕ್ಕೆಲ್ಲ ಖರ್ಗೆ, ರಾಹುಲ್ ಗಾಂಧಿ ಪರಿಹಾರ ಹುಡುಕುತ್ತಾರೆ: ಕೆ ಹರಿಪ್ರಸಾದ್

ಮುಂದಿನ ಸುದ್ದಿ
Show comments