Publish Date: Thu, 22 Aug 2024 (14:21 IST)
Updated Date: Thu, 22 Aug 2024 (14:27 IST)
ಬೆಂಗಳೂರು: ಮುಡಾ ಸೈಟು ಹಗರಣದಲ್ಲಿ ತಮ್ಮ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರೂ ತಾವು ಕೇರ್ ಮಾಡಿಲ್ಲ ಎಂಬಂತೆ ತೋರಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಇಂದು ವಿಧಾನಸೌಧಕ್ಕೆ ವಿಶಲ್ ಹೊಡೆಯುತ್ತಾ ಬಂದಿದ್ದಾರೆ.
ರಾಜ್ಯಪಾಲರು ತಮ್ಮ ವಿರುದ್ಧ ತನಿಖೆಗೆ ಅನುಮತಿಸುತ್ತಿದ್ದಂತೇ ಸಿದ್ದರಾಮಯ್ಯ ಕೊಂಚ ಗಲಿಬಿಲಿಯಾಗಿದ್ದರು. ಅಧಿಕಾರಿಗಳ ಜೊತೆ, ಕಾನೂನು ತಜ್ಞರ ಜೊತೆ ಸತತ ಮೀಟಿಂಗ್ ನಡೆಸಿ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯಾವ ದಾರಿಯಿದೆ ಎಂದು ನೋಡಿಕೊಂಡಿದ್ದರು. ಆದರೆ ಇಂದು ಮಾಧ್ಯಮಗಳ ಎದುರು ಬಂದ ಸಿದ್ದರಾಮಯ್ಯ ಕೊಂಚ ನಿರಾಳವಾಗಿದ್ದುದು ಕಂಡುಬಂದಿದೆ.
ಇಂದು ವಿಧಾನಸೌಧಕ್ಕೆ ತಮ್ಮ ಸಂಗಡಿಗರ ಜೊತೆ ಬಂದ ಸಿದ್ದರಾಮಯ್ಯ ವಿಶಲ್ ಹೊಡೆಯುತ್ತಾ ನಗು ನಗುತ್ತಾ ತಾವು ಆರಾಮವಾಗಿರುವುದಾಗಿ ಮಾಧ್ಯಮಗಳ ಮುಂದೆ ತೋರಿಸಿಕೊಂಡಿದ್ದಾರೆ. ಕೇವಲ ಶಿಳ್ಳೆ ಮಾತ್ರವಲ್ಲ, ತಮ್ಮ ಪಕ್ಕದಲ್ಲಿದ್ದವರ ಮುಂದೆ ಗತ್ತು ತೋರುತ್ತಾ, ಹೆಗಲ ಮೇಲೆ ಕೈ ಹಾಕಿಕೊಂಡು ನಡೆದಾಡಿದ್ದಾರೆ.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಪರವಾಗಿ ಇಡೀ ಸಚಿವ ಸಂಪುಟವೇ ನಿಂತಿದೆ. ನಾಳೆ ದೆಹಲಿಗೆ ತೆರಳಿ ಅವರು ಪ್ರಕರಣದ ಬಗ್ಗೆ ವರಿಷ್ಠರಿಗೆ ವಿವರಣೆ ನೀಡಲಿದ್ದಾರೆ. ತಮ್ಮ ಬೆನ್ನಿಗೆ ಪಕ್ಷ ನಿಂತಿರುವುದರಿಂದ ಸಿದ್ದರಾಮಯ್ಯ ನಿರಾಳವಾಗಿರುವಂತೆ ಕಾಣುತ್ತಿದೆ.