Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಹಿರಿಯರ ಮಾತನ್ನು ಕೇಳಬೇಕು-ಸವಾಲಿಗೆ ಸವಾಲು ಸರಿಯಲ್ಲ..!

Siddaramaiah should listen to the words of the elders-challenge for challenge is not right
bangalore , ಮಂಗಳವಾರ, 23 ಆಗಸ್ಟ್ 2022 (18:02 IST)
ನಾಡಿನ ಹಿತ, ರಾಜಕಾರಣದ ಗೌರವರದ ಪರವಾಗಿ ಮಡಿಕೇರಿ ಮುತ್ತಿಗೆ ಕಾರ್ಯಕ್ರಮ ಹಿಂದೆ ತಗೆದುಕೊಳ್ಳಿ. ಚುನಾವಣೆ ಹತ್ತಿರ ಬರುತ್ತಿದೆ, ಎನಾದರೂ ಹೆಚ್ಚು ಕಮ್ಮಿ ಆದರೆ ಯಾರು ಹೊಣೆ ಎಂದು ಸಿದ್ದರಾಮಯ್ಯ ಅವರಲ್ಲಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದೆ ವಿಚಾರ ಬಹಳ ದೊಡ್ಡದಾಗಿದೆ. ಕಾಂಗ್ರೆಸ್ ಕಾರ್ಯಕರ್ತರ ಜತೆಗೆ ಕೊಡಗಿಗೆ ಮುತ್ತಿಗೆ ಹಾಕುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷದಲ್ಲಿ ಸಂಘಟನೆ ಜೋರಾಗುತ್ತಿದೆ. ಸಿದ್ದರಾಮಯ್ಯ ರಾಜಕೀಯ ಮುತ್ಸದ್ದಿ, ರಾಜಕೀಯ ಏಳು ಬೀಳು ಕಂಡವರು ಎಂದರು. ಯಾರು ಯಾರಿಗೂ ದೊಡ್ಡವರಲ್ಲ. ಸಿದ್ದರಾಮಯ್ಯ ಹಿರಿಯರ ಮಾತನ್ನು ಕೇಳಬೇಕು. ಸವಾಲಿಗೆ ಸವಾಲು ಸರಿಯಲ್ಲ. ಕೊಡಗಿನ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಕೊಡವರಿಗೆ ರಾಜಕೀಯ ಪ್ರಾಧಾನ್ಯತೆ ಸಿಕ್ಕಿಲ್ಲ. ಕಾಂಗ್ರೆಸ್ ನವರು ಅದನ್ನು ಮಾಡಿಲ್ಲ.ಕೊಡಗಿನಲ್ಲಿ ಹಲವು ಸಮಸ್ಯೆಗಳಿವೆ. ಶಾಂತಿಯನ್ನು ಯಾರೂ ಕದಡಬಾರದು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟಾರ್ ಹೋಟೆಲ್‍ಗೆ ಬಾಂಬ್ ಬೆದರಿಕೆ!