Publish Date: Fri, 28 Jun 2019 (16:00 IST)
Updated Date: Fri, 28 Jun 2019 (16:02 IST)
ನಿದ್ದೆ ಮಾಡೋರಿಗೆ ಮತ ಹಾಕಬೇಡಿ. ಹೀಗಂತ ಮಾಜಿ ಸಿಎಂ ಹೇಳಿದ್ದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಹೊಸ ವಿವಾದಕ್ಕೆ ಕಾರಣವಾಗ್ತಿದೆ.
ನಿದ್ದೆ ಮಾಡೋರಿಗೆ ಯಾವತ್ತೂ ಮತಹಾಕಬೇಡಿ ಎಂದು ನಾನು ಹೇಳಿದ್ದೇನೆ. ನಿಮ್ಮ ಮತ ಪಡೆದುಕೊಂಡು ಬಿಜೆಪಿಯವರು ನಿದ್ರೆ ಮಾಡುತ್ತಿದ್ದಾರೆ. ಹೀಗಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು, ಇದೇ ವೇಳೆ ತಮ್ಮ ಹೇಳಿಕೆ ತಿರುಚಲಾಗಿದೆ ಎಂದು ಮಾಧ್ಯಮಗಳ ಮೇಲೆ ಕಿಡಿಕಾರಿದ್ರು.
ಬಾದಾಮಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನನ್ನ ಹೇಳಿಕೆಗೂ ಸಿಎಂ ಹೇಳಿಕೆಗೂ ಲಿಂಕ್ ಮಾಡಿದ್ದೀರಿ. ನಾನು ಹೇಳಿದ್ದು ಹಾಗೂ ಹೇಳ್ತಿರೋದು ಕೆಲಸ ಮಾಡೋರಿಗೆ ಮತ ಹಾಕಬೇಕು ಎಂದು. ಹೀಗಂತ ಗರಂ ಆದರು.
ನಾನೇನು ತಪ್ಪು ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಗಳನ್ನು ತಿರುಚುವ ಕಾರ್ಯ ಮಾಡಬೇಡಿ ಎಂದು ಮಾಧ್ಯಮದವರಿಗೆ ತಿಳಿಸಿದ್ರು.
ರಾಜಕೀಯದಲ್ಲಿ ಯಾವಾಗಲೂ ಚುನಾವಣೆಗೆ ಸಿದ್ಧರಾಗಿರಬೇಕು.
ಕೆಲಸ ಮಾಡುತ್ತಲೇ ಇರಬೇಕು ಎಂದು ಮಾರ್ಮಿಕವಾಗಿ ಹೇಳಿದ್ರು. ಕಾಂಗ್ರೆಸ್ ಪಕ್ಷದ ಮೂಲಕವೇ ಅಹಿಂದ ವರ್ಗಕ್ಕೆ ನ್ಯಾಯ ಕೊಡಿಸಲು ಆದ್ಯತೆ ನೀಡುವುದಾಗಿ ಸಿದ್ದರಾಮಯ್ಯ ಹೇಳಿದ್ರು.