Publish Date: Fri, 28 Jun 2019 (15:08 IST)
Updated Date: Fri, 28 Jun 2019 (15:10 IST)
ಹೆಚ್.ಡಿ.ಕುಮಾರಸ್ವಾಮಿ ಕರ್ನಾಟಕ ಸರಕಾರದ ಮುಖ್ಯಮಂತ್ರಿ ಆಗಿಲ್ಲದಿದ್ದರೆ ಅವರನ್ನು ನಾಯಿಯೂ ಮೂಸುತ್ತಿರಲಿಲ್ಲ. ಹೀಗಂತ ಬಿಜೆಪಿ ನಾಯಕ ಕಟು ಟೀಕೆ ಮಾಡಿದ್ದಾರೆ.
ಮುಖ್ಯಮಂತ್ರಿ ಆಗಿರುವ ಕಾರಣಕ್ಕೆ ಜನರು ತಮ್ಮ ಸಮಸ್ಯೆಗಳನ್ನು, ಕಷ್ಟಗಳನ್ನು ಹೇಳಿಕೊಳ್ಳಲು ಕುಮಾರಸ್ವಾಮಿಗೆ ಬಳಿಗೆ ಹೋಗುತ್ತಾರೆ. ಆದರೆ ಸಿಎಂ ಹೇಳಿಕೆ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಷ್ಟಗಳನ್ನು ಹೇಳಿಕೊಳ್ಳಲು ಬಂದ ಜನರ ಮೇಲೆ ಲಾಠಿ ಚಾರ್ಜ್ ಮಾಡಿಸೋದಾಗಿ ಕುಮಾರಸ್ವಾಮಿ ಹೇಳಿರುವುದಕ್ಕೆ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮತ ಹಾಕಿಲ್ಲ ಎಂಬ ಕಾರಣಕ್ಕೆ ಬಾಯಿಗೆ ಬಂದ ಹಾಗೆ ಮಾತನಾಡಬಾರದು. ಕಾಂಗ್ರೆಸ್- ಜೆಡಿಎಸ್ ಗಳಿಗೆ ಮತ ಹಾಕಲಿ ಬಿಡಲಿ, ಮುಖ್ಯಮಂತ್ರಿಯಾದ ಮೇಲೆ ಸಮಸ್ಯೆಗಳನ್ನು ಕೇಳಬೇಕು ಅಂತ ಈಶ್ವರಪ್ಪ ಹೇಳಿದ್ದಾರೆ.