Webdunia - Bharat's app for daily news and videos

Install App

ಮೋದಿ ಭ್ರಷ್ಟಾಚಾರದ ಭಾಗಿದಾರ ಎಂದ ಸಿದ್ದರಾಮಯ್ಯ

Webdunia
ಸೋಮವಾರ, 13 ಆಗಸ್ಟ್ 2018 (17:37 IST)
ಪ್ರಧಾನಿ ನರೇಂದ್ರ ಮೋದಿ ಸುಳ್ಳು  ಭರವಸೆಯನ್ನ ನೀಡಿದ್ದಾರೆ. ಅವರಿಗೆ ಮುಂದಿನ ಲೋಕ ಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ. ಮೋದಿ ಪ್ರಧಾನಿ ಅಲ್ಲ ಅವರು ಭ್ರಷ್ಟಾಚಾರದ ಭಾಗಿದಾರ ಅಂತ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೀದರ್ ನಲ್ಲಿ ಏರ್ಪಡಿಸಿದ್ದ ಬೃಹತ್ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಮೋದಿ ಕಪ್ಪು ಹಣ ಭಾರತಕ್ಕೆ ತರುತ್ತೇನೆ ಅಂತ ಸುಳ್ಳು ಭರವಸೆ ನೀಡಿದ್ದಾರೆ. ಎರಡು ಕೋಟಿ ಉದ್ಯೋಗ ಎಲ್ಲಿ ಹೋಯ್ತು? ಕಪ್ಪು ಹಣ ಎಲ್ಲಿ ಹೋಯ್ತು? ಎಂದು ಪ್ರಶ್ನಿಸಿದರು.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತೆ. ಮೋದಿಯವರದ್ದು ಕೇವಲ ಮನ್ ಕಿ ಬಾತ್ ಕಾಮ್ ಕಿ ಬಾತ್ ಇಲ್ಲಾ ಎಂದು ಟೀಕಿಸಿದರು. ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಈ ಭಾಗದಿಂದ ಹೆಚ್ಚಿನ ಸ್ಥಾನ ಗೆಲ್ಲಿಸಿ ಕಳುಹಿಸಬೇಕು.

ಬಡವರಿಗೆ ನ್ಯಾಯ ಕೆಲಸ ಕೊಡುವಂತ ಕೆಲಸ ಮಾಡ್ತಿವಿ. ಪ್ರಜಾ ಪ್ರಭುತ್ವ ಉಳಿಯಬೇಕಾದ್ರೆ ರಾಹುಲ್ ಗಾಂಧಿ ಗೆ ಪ್ರಧಾನಿ ಮಾಡಬೇಕು. ಬಿಜೆಪಿ ದಲಿತರ ರಕ್ಷಣೆ ಮಾಡ್ತಿವಿ ಅಂತ ಗಿಮಿಕ್ ಮಾಡ್ತಾರೆ ಅಂತ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ಧರಾಮಯ್ಯ ಹೇಳಿಕೆ ನೀಡಿದ್ದಾರೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments