ಅತೃಪ್ತ ಶಾಸಕರು ಅನರ್ಹಗೊಂಡಿದ್ದೇ ಸರಿ ಎಂದ ಸಿದ್ದರಾಮಯ್ಯ

ಭಾನುವಾರ, 28 ಜುಲೈ 2019 (18:53 IST)
ಜನರು ಶಾಸಕರನ್ನಾಗಿ ಆಯ್ಕೆ ಮಾಡಿದ್ದರೂ ತಮ್ಮನ್ನು ತಾವು ಮಾರಾಟ ಮಾಡಿಕೊಳ್ಳುವಂತಹ ಕೆಟ್ಟ ಪರಂಪರೆಗೆ ಅನರ್ಹತೆ ಆದೇಶ ಪಾಠ ಆಗಬೇಕು. ಹೀಗಂತ ಕಾಂಗ್ರೆಸ್ ನ ಮಾಜಿ ಸಿಎಂ ಹೇಳಿದ್ದಾರೆ.

ಅತೃಪ್ತ 14 ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿ ಆದೇಶ ಹೊರಡಿರುವುದನ್ನು ಸ್ವಾಗತಿಸಿರೋ ಮಾಜಿ ಸಿಎಂ ಸಿದ್ದರಾಮಯ್ಯ, ಅಧಿಕಾರಕ್ಕಾಗಿ ಜನರ ಆದೇಶದ ವಿರುದ್ಧ ಹೋದವರು ಅನರ್ಹಗೊಂಡಿದ್ದಾರೆ.

ಪಕ್ಷ ವಿರೋಧ ಚಟುವಟಿಕೆ ನಡೆಸಿ 14 ಶಾಸಕರು ಅನರ್ಹಗೊಳಿಸಿ ನೀಡಿರೋ ಆದೇಶವು ಪ್ರಜಾಪ್ರಭುತ್ವಕ್ಕೆ ದೊರಕಿದ ಜಯವಾಗಿದೆ ಎಂದಿದ್ದಾರೆ.

ರಾಜಕಾರಣದಲ್ಲಿ ಅಧಿಕಾರ ಯಾವತ್ತಿಗೂ ಶಾಶ್ವತವಾದದ್ದಲ್ಲ. ಸರಕಾರ, ಅಧಿಕಾರ ಬಂದು ಹೋಗುತ್ತವೆ. ಆದರೆ ನಾವು ಮಾಡಿರೋ ಕೆಲಸ ಮಾದರಿಯಾಗಬೇಕು ಅಂತ ಸಿದ್ದರಾಮಯ್ಯ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹುಡುಗಿ ಫೋನ್ ಕರೆ ಸ್ವೀಕರಿಸದಿದ್ದಕ್ಕೆ ಹೆಣವಾದಳಾ?