ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರ ಕೊನೆಯಾಗಲು ಕಾರಣವಾಗಿರೋ 14 ಜನ ಕಾಂಗ್ರೆಸ್ –ಜೆಡಿಎಸ್ ಶಾಸಕರನ್ನು ಅನರ್ಹಗೊಳಿಸಲಾಗಿದೆ.
ಸ್ಪೀಕರ್ ರಮೇಶ್ ಕುಮಾರ್ ಈ ಆದೇಶ ಹೊರಡಿಸಿದ್ದು, ರಾಜಕೀಯದಲ್ಲಿ ಹಲವು ಚರ್ಚೆಗಳು ಗರಿಗೆದರುವಂತಾಗಿದೆ.
ಈ ಹಿಂದೆ ಮೂವರು ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಲಾಗಿತ್ತು. ಈಗ 14 ಶಾಸರನ್ನು ಸೇರಿಸಿದರೆ ಒಟ್ಟು 17 ಜನ ಶಾಸಕರು ಅನರ್ಹಗೊಂಡಂತಾಗಿದೆ.
ಕಲಾಪಕ್ಕೆ ಗೈರಾಗಿದ್ದ ಶ್ರೀಮಂತ ಪಾಟೀಲ್ ಸೇರಿದಂತೆ 14 ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಂತೆ ಅನರ್ಹಗೊಳಿಸಲಾಗಿದೆ.
ಅನರ್ಹಗೊಂಡ ಶಾಸಕರು ಇವರು:
ಪ್ರತಾಪಗೌಡ ಪಾಟೀಲ್, ಮಸ್ಕಿ
ಬಿ.ಸಿ.ಪಾಟೀಲ್, ಹಿರೇಕೆರೂರು
ಅರಬೈಲು ಶಿವರಾಂ ಹೆಬ್ಬಾರ, ಯಲ್ಲಾಪುರ
ಎಸ್.ಟಿ.ಸೋಮಶೇಖರ, ಯಶವಂತಪುರ
ಬಿ.ಎ.ಬಸವರಾಜು, ಕೆ.ಆರ್.ಪುರ
ಆನಂದ ಸಿಂಗ್, ವಿಜಯನಗರ
ಆರ್.ರೋಷನ್ ಬೇಗ್, ಶಿವಾಜಿನಗರ
ಮುನಿರತ್ನ, ರಾಜರಾಜೇಶ್ವರಿ ನಗರ
ಕೆ.ಎಸ್.ಸುಧಾಕರ, ಚಿಕ್ಕಬಳ್ಳಾಪುರ
ಎಂಟಿಬಿ ನಾಗರಾಜ, ಹೊಸಕೋಟೆ
ಎ.ಹೆಚ್.ವಿಶ್ವನಾಥ, ಹುಣಸೂರು
ಕೆ.ಸಿ.ನಾರಾಯಣಗೌಡ, ಕೆ.ಆರ್.ಪೇಟೆ,
ಕೆ.ಗೋಪಾಲಯ್ಯ, ಮಹಾಲಕ್ಷ್ಮೀ ಲೇಔಟ್
ಶ್ರೀಮಂತ ಬಾಳಾ ಸಾಹೇಬ್ ಪಾಟೀಲ್, ಕಾಗವಾಡ
ಅನರ್ಹಗೊಂಡ ಶಾಸಕರು 15ನೇ ವಿಧಾನಸಭೆ ಅವಧಿ ಮುಗಿಯೋವರೆಗೂ ಚುನಾವಣೆಗೆ ಸ್ಪರ್ಧೆ ಮಾಡುವಂತಿಲ್ಲ.