Publish Date: Sat, 02 Mar 2024 (21:02 IST)
Updated Date: Sun, 03 Mar 2024 (10:33 IST)
ಬೆಂಗಳೂರು-ಸರ್ಕಾರ ವರದಿ ಬಗ್ಗೆ ಏನು ಮಾಡುತ್ತದೆ ನೋಡ್ತೇವೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.ನಾವು ಸುಮ್ಮನೆ ಕೂರುವುದಿಲ್ಲ.ವೈಜ್ಞಾನಿಕವಾಗಿ ಮಾಡಬೇಕು ಇನ್ನೊಮ್ಮೆ 9 ವರ್ಷದ ಹಳೆಯದನ್ನು ಈಗ ತಂದಿದ್ದಾರೆ.ಕಾಂತರಾಜು ವರದಿಯನ್ನು ಈಗ ಅವರು ತಂದುಕೊಟ್ಟಿದ್ದಾರೆ.
ನಮ್ಮ ಜನಸಂಖ್ಯೆ 2 ಕೋಟಿ ಗೂ ಹೆಚ್ಚಿದೆ.ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿದ್ದಾರೆ ಎನಿಸುತ್ತದೆ.ಈ ವರದಿಯನ್ನು ಮೂಲೆಗೆ ಹಾಕಬೇಕು ಈಗಲೂ ಹೇಳ್ತೇನೆ .ಈ ವರದಿಯನ್ನು ಮನೆಯಲ್ಲೇ ಕೂತು ಮಾಡಿದ್ದಾರೆ.ಕಾಂಗ್ರೆಸ್ ಗೆ ಸಮಸ್ಯೆ ಆಗುತ್ತದೆಯಾ ಎಂಬ ಪ್ರಶ್ನೆಗೆ ನಾನು ಈಗ ಕೂಲಂಕುಷವಾಗಿ ಹೇಳೋದಕ್ಕೆ ಹೋಗಲ್ಲ.ಸಿದ್ದರಾಮಯ್ಯ ನಮ್ಮ ಅಭಿಪ್ರಾಯಗಳಿಗೆ ಎಲ್ಲಪ್ಪ ಮನ್ನಣೆ ಕೊಡ್ತಾರೆ.ಜಾತಿ ಜಾತಿಗಳ ನಡುವೆ ಸಂಘರ್ಷ ಆಗುತ್ತದೆ.ಜಾತಿ ಜಾತಿಗಳ ನಡುವೆ ಅವರು ಛೂ ಬಿಡ್ತಿದ್ದಾರೆ.
ನಾವು ಎಸ್.ಸಿ ಎಸ್.ಟಿ ವಿರುದ್ದವಲ್ಲ ಆದರೆ ನಮ್ಮ ಸಂಖ್ಯೆ ಡಬಲ್ ಇದೆ.ಅಗತ್ಯ ಬಿದ್ದರೆ ನಾವೂ ಖಾಸಗಿಯಾಗಿ ಸರ್ವೆ ಮಾಡಿಸುತ್ತೇವೆ.ಉಪ ಪಂಗಡ ಎಲ್ಲ ಸೇರಿ 2 ಕೋಟಿ ಗೂ ಹೆಚ್ಚಿದ್ದೇವೆ ಲಿಂಗಾಯತರು ಈ ವರದಿಯನ್ನು ನಾವು ಒಪ್ಪಲ್ಲ ಎಂದ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.