Publish Date: Sat, 13 Apr 2024 (15:15 IST)
Updated Date: Sat, 13 Apr 2024 (15:20 IST)
ರಾಮನಗರ: ಸಿಎಂ ಸಿದ್ದರಾಮಯ್ಯ ಅವರ ಮೂಲ ನಮ್ಮ ಪಕ್ಷದವರಲ್ಲ, ಬೇರೆ ಪಕ್ಷದಿಂದ ಬಂದಿದ್ದರೂ ನಾವು ಅವರಿಗೆ ಅವಕಾಶ ಕೊಟ್ಟು, ಎರಡು ಬಾರಿ ಸಿಎಂ ಆಗಿ ಆಯ್ಕೆ ಮಾಡಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಹೇಳಿದರು.
ರಾಮನಗರದಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಅಧಿಕಾರದಲ್ಲಿ ಬಡವರ ಪರ ಯೋಜನೆಗಳನ್ನು ತಂದಿದ್ದಾರೆ. ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಹೊಸ ಕಾಯಕಲ್ಪ ಕೊಟ್ಟಿದ್ದಾರೆ. ಹಾಗಾಗಿ ಹಣೇಲಿ ಬರೆದಿದ್ದರೆ ಎಲ್ಲಾ ಆಗುತ್ತೆ, ಬರೆದಿಲ್ಲ ಅಂದ್ರೆ ಏನೂ ಮಾಡೋಕಾಗಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಜೆಡಿಎಸ್‌ನಲ್ಲಿದ್ದಾಗ ಅವರನ್ನು ಬೀಗ ಹಾಕಿ ಕೂರಿಸಿದ್ರು, ಸಸ್ಪೆಂಡ್ ಮಾಡಿದ್ದರು. ಆದರೆ ಅವರ ಯೋಗ ಕಾಂಗ್ರೆಸ್‌ನಲ್ಲಿ ಬರೆದಿತ್ತು. ಹಾಗೆಯೇ ನಿಮ್ಮ ಯೋಗ ಸಹ ಬರೆದಿರಬಹುದು. ಯಾರನ್ನೂ ಅಡ್ಡ ಹಾಕೋಕೆ ಹೋಗ್ಬೇಡಿ, ಕಾಂಗ್ರೆಸ್ ಪಕ್ಷ ಬೆಳೆಯುವ ರೀತಿ ಕೆಲಸಗಳನ್ನು ಮಾಡಿ, ಬೆಂಬಲ ಸೂಚಿಸಿ ಎಂದು ಕೇಳಿಕೊಂಡರು.