Select Your Language

Notifications

webdunia
webdunia
webdunia
webdunia

ಸಿಎಂ ಆಗಿ ಸಿದ್ದರಾಮಯ್ಯನವರು ಉತ್ತಮ ಕೆಲಸ ಮಾಡುತ್ತಿದ್ದಾರೆ: ಸಿದ್ಧಲಿಂಗ ಸ್ವಾಮೀಜಿ

Chief Minister Siddaramaiah, Shivrathriswara Shivyogis Jatra Mahotsava,Tumkur Siddhaganga Mutt Siddhalinga Swamiji,

Sampriya

ಸುತ್ತೂರು , ಶುಕ್ರವಾರ, 31 ಜನವರಿ 2025 (19:51 IST)
Photo Courtesy X
ಸುತ್ತೂರು (ಮೈಸೂರು ಜಿಲ್ಲೆ): ನುಡಿದಂತೆ ಸಿದ್ದರಾಮಯ್ಯ ಅವರು ಐದು ಗ್ಯಾರಂಟಿಗಳನ್ನೂ ಸಮರ್ಥವಾಗಿ ಜಾರಿಗೊಳಿಸಿ, ರಾಜ್ಯದ ಆರ್ಥಿಕ ಸ್ಥಿತಿ ಚೆನ್ನಾಗಿದೆ ಎಂದು ತೋರಿಸಿದ್ದಾರೆ.  ಈ ಮೂಲಕ ಸಿದ್ದರಾಮಯ್ಯ ಅವರು ಸಿಎಂ ಆಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಶ್ಲಾಘಿಸಿದರು.

ಇಲ್ಲಿ ಸುತ್ತೂರು ಮಠದಿಂದ ಶುಕ್ರವಾರ ಆಯೋಜಿಸಿದ್ದ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಾಜವಾದಿ ಚಿಂತನೆಯ ಅವರ ಮೇಲೆ ಬಸವಾದಿ ಶರಣರ ಪ್ರಭಾವ ಸಾಕಷ್ಟಿದೆ. ಜಾತ್ರೆಗಳು ಜನರನ್ನು ಒಗ್ಗೂಡಿಸುವಲ್ಲಿ, ಭಕ್ತಿ, ಅರ್ಚನಾ ಮನೋಭಾವ ಬೆಳೆಸುವಲ್ಲಿ ಹಾಗೂ ಸಾಮರಸ್ಯ ಮೂಡಿಸುವಲ್ಲಿ ಸಹಕಾರಿಯಾಗಿವೆ ಎಂದು ಹೇಳಿದರು.

ಸಂವಿಧಾನ ನಮ್ಮನ್ನು ಒಗ್ಗೂಡಿಸುತ್ತದೆ ಎಂಬುದನ್ನು ಎಲ್ಲರೂ ಒಪ್ಪಬೇಕು. 12ನೇ ಶತಮಾನದಲ್ಲಿ ಬಸವಣ್ಣ ಅವರು ನೀಡಿರುವುದು ಮಾನವೀಯ ಸಂವಿಧಾನ. ಭಾರತೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕಾದರೆ ಸಂವಿಧಾನವನ್ನು ಗೌರವಿಸಬೇಕು. ರಾಷ್ಟ್ರ ಲಾಂಛನಗಳನ್ನು ಗೌರವಿಸಬೇಕು ಎಂದು ಕರೆ ನೀಡಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಅರವಿಂದ್‌ ಕೇಜ್ರಿವಾಲ್‌ಗೆ ಬಿಗ್‌ಶಾಕ್‌: ಚುನಾವಣೆಗೆ 5ದಿನವಿರುವಾಗ AAP ತೊರೆದ 7ಶಾಸಕರು