ಅತೃಪ್ತ ಶಾಸಕರನ್ನ ಅನರ್ಹಗೊಳಿಸುವಂತೆ ಸ್ಪೀಕರ್ ಗೆ ದೂರು ನೀಡಿದ ಸಿದ್ಧರಾಮಯ್ಯ

ಸೋಮವಾರ, 11 ಫೆಬ್ರವರಿ 2019 (11:29 IST)
ಬೆಂಗಳೂರು : ಕಾಂಗ್ರೆಸ್ ನ ಅತೃಪ್ತ ಶಾಸಕರನ್ನ ಅನರ್ಹಗೊಳಿಸುವಂತೆ CLP ನಾಯಕ ಸಿದ್ಧರಾಮಯ್ಯ ಅವರು ಸ್ಪೀಕರ್ ಗೆ ದೂರು ನೀಡಿದ್ದಾರೆ.

ಶುಕ್ರವಾರ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅತೃಪ್ತರ ಅನರ್ಹತೆಗೆ ಸ್ಪೀಕರ್ ಗೆ  ಶಿಫಾರಸ್ಸು ಮಾಡಲು ನಿರ್ಧರಿಸಲಾಗಿತ್ತು. ಆದರೆ ಅತೃಪ್ತರಿಗೆ ಕಡೆಯ ಅವಕಾಶ ನೀಡುವ ಬಗ್ಗೆ ಯೋಚಿಸಿ, ಒಂದೆರಡು ದಿನ ಕಾದು ನೋಡಲು ಕೈ ಪಾಳಯ ನಿರ್ಧರಿಸಿತ್ತು.

 

ಆದರೆ ಅತೃಪ್ತ ಶಾಸಕರು ಪಕ್ಷದ ಎಲ್ಲಾ ಆದೇಶ, ಸೂಚನೆಗಳನ್ನು ಉಲ್ಲಂಘಿಸಿದ  ಹಿನ್ನಲೆಯಲ್ಲಿ ಇಂದು ಸಿದ್ಧರಾಮಾಯ್ಯ ಪಕ್ಷದ ನಾಯಕರ ಜೊತೆಗೆ ತೆರಳಿ ಅತೃಪ್ತ ಶಾಸಕರನ್ನ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಸ್ಪೀಕರ್ ಗೆ ದೂರು ನೀಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೆಪಿಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಸ್.ಎಂ.ಕೃಷ್ಣ ಮೊಮ್ಮಗ ನಿರಂತರ ಗಣೇಶ್