Daily Horoscope

Select Your Language

Notifications

webdunia
webdunia
webdunia
webdunia

ಅಲಂದಾ ದರ್ಗಾ ವಿವಾದ ಸೇರಿದಂತೆ 52 ಕ್ರಿಮಿನಲ್ ಪ್ರಕರಣ ಹಿಂಪಡೆದ ಸರ್ಕಾರ: ಭಾರೀ ವಿವಾದ

Siddaramaiah
ಬೆಂಗಳೂರು: ಅಲಂದಾ ದರ್ಗಾದಲ್ಲಿ ಶಿವಲಿಂಗ ಪೂಜೆಗೆ ಅವಕಾಶ ನೀಡುವ ಕುರಿತಂತೆ ವಿವಾದ ಸೇರಿದಂತೆ 52 ಕ್ರಿಮಿನಲ್ ಪ್ರಕರಣಗಳನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿ ಹಿಂಪಡೆಯಲಾಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಕನ್ನಡ ಹೋರಾಟಗಾರರ ಪ್ರಕರಣಗಳು, ಅಲಂದಾ ದರ್ಗಾ ವಿವಾದ ಕೇಸ್ ಈ ಪೈಕಿ ಪ್ರಮುಖವಾಗಿದೆ.  2022ರಲ್ಲಿ ಆಳಂದ್‌ನಲ್ಲಿ ನಡೆದಿದ್ದ ಕೋಮು ಸಂಘರ್ಷ ಮತ್ತು ವಿವಾದಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ 7 ಪ್ರಮುಖ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ಈ ದರ್ಗಾ ಆವರಣದಲ್ಲಿ 'ರಾಘವ ಚೈತನ್ಯ ಶಿವಲಿಂಗ' ಇದೆ ಎಂದು ಹೇಳಲಾಗುತ್ತಿದ್ದು, ಅಲ್ಲಿ ಪೂಜೆ ಸಲ್ಲಿಸುವ ವಿಚಾರವಾಗಿ ಎರಡು ಸಮುದಾಯಗಳ ನಡುವೆ ತೀವ್ರ ಘರ್ಷಣೆ ನಡೆದಿತ್ತು. ಮಹಾಶಿವರಾತ್ರಿಯ ಸಂದರ್ಭದಲ್ಲಿ ಪೂಜೆ ಸಲ್ಲಿಸಲು ಹಿಂದೂ ಸಂಘಟನೆಗಳು ಮುಂದಾದಾಗ ಉಂಟಾದ ಕಾನೂನು ಸುವ್ಯವಸ್ಥೆ ಧಕ್ಕೆಯ ಹಿನ್ನೆಲೆಯಲ್ಲಿ ಈ ಕೇಸ್‌ಗಳನ್ನು ದಾಖಲಿಸಲಾಗಿತ್ತು. ಈ ಪ್ರಕರಣಗಳಲ್ಲಿ ಕೆಲವು ಸದ್ಯ ಹೈಕೋರ್ಟ್ ಹಂತದಲ್ಲಿದ್ದು, ಅವುಗಳನ್ನು ಸರ್ಕಾರ ಹಿಂಪಡೆಯುತ್ತಿದೆ. ಈ ವಿವಾದ ಸಂದರ್ಭದಲ್ಲಿ ಗಲಾಟೆ ನಡೆದಾಗ ಮುಸ್ಲಿಂ ಯುವಕರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದರು.

ಸರ್ಕಾರದ ಮೂಲಗಳ ಪ್ರಕಾರ, ಹಿಂಪಡೆಯಲಾದ ಪ್ರಕರಣಗಳಲ್ಲಿ ಬಹುಪಾಲು ಕನ್ನಡಪರ ಸಂಘಟನೆಗಳು, ರೈತ ಹೋರಾಟಗಾರರು, ದಲಿತ ಕಾರ್ಯಕರ್ತರು ಮತ್ತು ಕಾವೇರಿ ಹಾಗೂ ಕಳಸಾ-ಬಂಡೂರಿ ನೀರಿನ ಹೋರಾಟದ ವೇಳೆ ದಾಖಲಾಗಿದ್ದ ಕೇಸ್‌ಗಳಾಗಿವೆ. ಪ್ರಸಿದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸುಮಾರು 10 ಪ್ರಕರಣಗಳನ್ನು ಸಹ ಕೈಬಿಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬದಲಾವಣೆ ಬಗ್ಗೆ ರಣದೀಪ್ ಸುರ್ಜೇವಾಲರಿಂದ ಡಿಕೆಶಿ, ಸಿದ್ದರಾಮಯ್ಯಗೆ ಮಹತ್ವದ ಸಂದೇಶ