Daily Horoscope

Select Your Language

Notifications

webdunia
webdunia
webdunia
webdunia

ಸಿಎಂ ಬದಲಾವಣೆ ಬಗ್ಗೆ ರಣದೀಪ್ ಸುರ್ಜೇವಾಲರಿಂದ ಡಿಕೆಶಿ, ಸಿದ್ದರಾಮಯ್ಯಗೆ ಮಹತ್ವದ ಸಂದೇಶ

Randeep Surjewala-CM Siddaramaiah-DK Shivakumar
ಬೆಂಗಳೂರು: ಕರ್ನಾಟಕದಲ್ಲಿ ಸಿಎಂ ಬದಲಾವಣೆ, ಸಂಪುಟ ಪುನರಾರಚನೆ ಸಂಬಂಧ ಹೈಕಮಾಂಡ್ ಬುಲಾವ್ ಗೆ ಕಾಯುತ್ತಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಗೆ ಎಐಸಿಸಿ ನಾಯಕ ರಣದೀಪ್ ಸುರ್ಜೇವಾಲರಿಂದ ಮಹತ್ವದ ಸೂಚನೆ ಬಂದಿದೆ.

ಮೇ 24 ರ ಬಳಿಕ ರಾಹುಲ್ ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ. ಹೀಗಾಗಿ ಸದ್ಯದಲ್ಲೇ ಹೈಕಮಾಂಡ್ ತಮ್ಮನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡಸಲಿದೆ ಎಂದು ಸಿದ್ದರಾಮಯ್ಯು ಮತ್ತು ಡಿಕೆ ಶಿವಕುಮಾರ್ ಕಾಯುತ್ತಿದ್ದಾರೆ.

ಇದರ ನಡುವೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಖಾಸಗಿ ಹೋಟೆಲ್ ಒಂದರಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಜೊತೆಗೆ ಹೈಕಮಾಂಡ್ ನಿಂದ ಬಂದ ಸಂದೇಶವನ್ನೂ ರವಾನಿಸಿದ್ದಾರೆ.

ಸದ್ಯದಲ್ಲೇ ಹೈಕಮಾಂಡ್ ಜೊತೆ ಚರ್ಚಿಸಿ ದೆಹಲಿಗೆ ಯಾವಾಗ ಭೇಟಿ ನೀಡಬೇಕು ಎಂಬ ಬಗ್ಗೆ ತಿಳಿಸುವುದಾಗಿ ಮಹತ್ವದ ಸಂದೇಶ ರವಾನಿಸಿದ್ದಾರೆ. ಈ ವೇಳೆ ನೇರವಾಗಿ ರಾಹುಲ್ ಗಾಂಧಿಯವರನ್ನೇ ಭೇಟಿ ಮಾಡಿ ಮಾತುಕತೆ ನಡೆಸಲು ಡಿಕೆಶಿ ಹಾಗೂ ಸಿದ್ದರಾಮಯ್ಯ ಅವಕಾಶ ಕೋರಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Video: ಥೂ ಇವನೆಂಥಾ ಚಪಲಿಗ.. ಹುಡುಗಿಯರ ಪೋಸ್ಟರ್ ನ್ನೂ ಬಿಡದೇ ಕಂಡ ಕಂಡಲ್ಲಿ ನೆಕ್ಕಿದ ಭೂಪ