Webdunia - Bharat's app for daily news and videos

Install App

ಶೃತಿ ಬೆಳ್ಳಕ್ಕಿಗೆ ಸಿಕ್ತು ಜಾಮೀನು

Webdunia
ಶುಕ್ರವಾರ, 26 ಏಪ್ರಿಲ್ 2019 (15:03 IST)
ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಶೃತಿ ಬೆಳ್ಳಕ್ಕಿಗೆ ಜಾಮೀನು ಮಂಜೂರು ಆಗಿದೆ.

ಜಾಮೀನು ಅರ್ಜಿ ವಿಚಾರಣೆ ನಡೆಸಿದ ಧಾರವಾಡದ ಪ್ರಥಮ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಆಚಪ್ಪ ದೊಡ್ಡ ಬಸವರಾಜ ಅವರು, ಶೃತಿ ಬೆಳ್ಳಕ್ಕಿ ಅವರಿಗೆ  ಜಾಮೀನು  ಮಂಜೂರು ಮಾಡಿದರು.

ಹಿರಿಯ ವಕೀಲರಾದ ಆರ್. ಯು. ಬೆಳ್ಳಕ್ಕಿ ಅವರು ಶೃತಿ ಪರ ಸುದೀರ್ಘವಾದ ಮಂಡಿಸಿದರು. ಆಕೆಯೂ ಕಾನೂನು ವಿದ್ಯಾರ್ಥಿಯಾಗಿದ್ದು, ಅವಳು ಯಾವುದೇ ದುರುದ್ದೇಶದಿಂದ ಆ ಮಾತುಗಳನ್ನು ಹೇಳಿಲ್ಲ.

ಅಲ್ಲದೆ, ಅವಳು ಮಾಡಿರುವ ಆರೋಪಗಳು ಯಾವುದೇ ಗಂಭೀರವಾದ ಆರೋಪಗಳು ಅಲ್ಲ. ತನ್ನ ಧರ್ಮದ ರಕ್ಷಣೆಗಾಗಿ ಆಕೆ ಮಾತನಾಡಿದ್ದಾಳೆ. ಹೀಗಾಗಿ ಮಾನ್ಯ ನ್ಯಾಯಾಲಯವು ಆಕೆಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.
ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಾಧೀಶರು  ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದರು.

ಬಳಿಕ ಶೃತಿ ಬೆಳ್ಳಕ್ಕಿಯವರನ್ನು  ಧಾರವಾಡ ಕೇಂದ್ರ ಕಾರಾಗೃಹದ ಮಹಿಳಾ ವಿಭಾಗದಿಂದ ಬಿಡುಗಡೆಗೊಳಿಸಲಾಯಿತು. 
ಶೃತಿ ಜೈಲಿನಿಂದ ಬಿಡುಗಡೆಗೊಳ್ಳುತ್ತಿದ್ದಂತೆ ಬಿಜೆಪಿ ಶಾಸಕ ಅಮೃತ ದೇಸಾಯಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಸ್ವಾಗತಿಸಿ, ಸಿಹಿ ತಿನ್ನಿಸಿ ಬರ ಮಾಡಿಕೊಂಡರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೈ ಉರಿ ತಾಳಲಾರದೆ ನೀರಿನ ಹೊಂಡದಲ್ಲೇ 5 ವರ್ಷ ಕಳೆದ ಬಾಲಕ, ಇದೀಗ ದಿಢೀರ್ ವಿಮಾನವೇರಿದ್ದೇಕೆ

ಸಚಿವ ಕೃಷ್ಣ ಭೈರೇಗೌಡ ಹೆಗಲಿಗೆ ಹೆಚ್ಚಿನ ಜವಾಬ್ದಾರಿ ವಹಿಸಿದ ಡಿಕೆ ಶಿವಕುಮಾರ್

ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳ್ಳತನ: ಎಸ್‌ಐಟಿ ಅಂತಿಮ ವರದಿ ಸಲ್ಲಿಕೆ

ಬೆಂಗಳೂರು ಡಬಲ್ ಮರ್ಡರ್ ಕೇಸ್‌, ಕೊನೆಗೂ ತನ್ನ ಕೃತ್ಯ ಬಿಚ್ಚಿಟ್ಟ ಪತ್ನಿ

ಈ ವ್ಯಕ್ತಿ ಶುಂಠಿಯನ್ನು ತೊಳೆಯುವುದು ನೋಡಿದ್ರೆ, ನೀವು ತೆಗೆದುಕೊಳ್ಳುವುದೇ ನಿಲ್ಲಿಸ್ತೀರಾ

ಮುಂದಿನ ಸುದ್ದಿ
Show comments