Select Your Language

Notifications

webdunia
webdunia
webdunia
webdunia

ಬದುಕಿರುವಾಗಲೇ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳಗೆ ಶ್ರದ್ಧಾಂಜಲಿ ಅರ್ಪಣೆ

ಬದುಕಿರುವಾಗಲೇ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳಗೆ ಶ್ರದ್ಧಾಂಜಲಿ ಅರ್ಪಣೆ
ಕಲಬುರಗಿ , ಬುಧವಾರ, 18 ಮಾರ್ಚ್ 2020 (10:38 IST)
ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೋವಿಂದ ಕಾರಜೋಳಗೆ ಜನರು ಶ್ರದ್ಧಾಂಜಲಿ ಸಮರ್ಪಣೆ ಮಾಡುತ್ತಿದ್ದಾರೆ.

ದೇಶದಲ್ಲಿ ಕೊರೊನಾ ವೈರಸ್ ನಿಂದ ಮೊದಲ ಸಾವು ಕಲಬುರಗಿಯಲ್ಲಿ ಸಂಭವಿಸಿದೆ. ಕೊರೊನಾ ಭೀತಿ ಜಿಲ್ಲೆಯ ಜನತೆಯಲ್ಲಿ ಹೆಚ್ಚಾಗಿದ್ದು, ಒಂದು ರೀತಿ ಅಘೋಷಿತ ಕರ್ಫೂ ಥರ ವಾತಾವರಣವಿದೆ.

ಇಂಥ ಸಂದರ್ಭದಲ್ಲಿ ಕಲಬುರಗಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಗೋವಿಂದ ಕಾರಜೋಳ ಭೇಟಿ ನೀಡೇ ಇಲ್ಲ. ಇದು ಬಿಸಿಲು ನಾಡಿನ ಜನರನ್ನು ಮತ್ತಷ್ಟು ಕೆರಳಿಸಿದೆ.

ಹೀಗಾಗಿ ಗೋವಿಂದ ಕಾರಜೋಳ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ಕಲಬುರಗಿಗೆ ಕಾಲಿಡದ ಉಸ್ತುವಾರಿ ವಿರುದ್ಧ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಕೆ ಮಾಡಲಾಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೇಳೋರಿಲ್ಲ ಚಿಕನ್, ಹೆಚ್ಚಾಯಿತು ಮಟನ್ ರೇಟ್