Select Your Language

Notifications

webdunia
webdunia
webdunia
webdunia

ಕೇಳೋರಿಲ್ಲ ಚಿಕನ್, ಹೆಚ್ಚಾಯಿತು ಮಟನ್ ರೇಟ್

ಕೇಳೋರಿಲ್ಲ ಚಿಕನ್, ಹೆಚ್ಚಾಯಿತು ಮಟನ್ ರೇಟ್
ಮೈಸೂರು , ಬುಧವಾರ, 18 ಮಾರ್ಚ್ 2020 (10:36 IST)
ಚಿಕನ್ ಪ್ರಿಯರಿಗೆ ಪೂರ್ಣ ನಿರಾಸೆಯಾಗುತ್ತಿದ್ದರೆ, ಸದ್ಯ ಮಟನ್ ಪ್ರಿಯರು ಕೈಗೆ ಎಟುಕದ ಬೆಲೆಯಿಂದಾಗಿ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಹಕ್ಕಿ ಜ್ವರದ ಕಾರಣದಿಂದಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿಕನ್ ಮಾರಾಟಕ್ಕೆ ಬ್ರೇಕ್ ಬಿದ್ದಿದೆ. ಚಿಕನ್ ಸಿಗದವರು ಸಹಜವಾಗಿಯೇ ಮಟನ್ ನತ್ತ ಕಣ್ಣು ಹಾಕುತ್ತಿದ್ದಾರೆ. ಹೀಗಾಗಿ ಮಟನ್ ರೇಟ್ ಹೆಚ್ಚಾಗಿದೆ.

500-550 ರೂ. ಇದ್ದ ಮಟನ್ ರೇಟ್ ಸದ್ಯ 600-650 ರೂ.ಗಳಿಗೆ ಮಾರಾಟವಾಗುತ್ತಿದೆ. ಮಟನ್ ಬೆಲೆ ಪ್ರತಿ ಕೆಜಿಗೆ 750-800 ರೂ.ಗಳವರೆಗೆ ಏರಿಕೆ ಆಗುವ ಸಾಧ್ಯತೆಗಳಿವೆ.

ಮೈಸೂರು ಜಿಲ್ಲಾಡಳಿತ ಹಕ್ಕಿ ಜ್ವರದ ಕಾರಣದಿಂದಾಗಿ ಹಕ್ಕಿ, ಕೋಳಿಗಳನ್ನು ಕೊಲ್ಲುವ ಸೂಚನೆಗೆ ಬಂದಿದೆ. ಹೀಗಾಗಿ ಕೆಲವು ದಿನಗಳವರೆಗೆ ಚಿಕನ್ ಸಿಗೋದಿಲ್ಲ.




Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನಲೆ; ತುರ್ತು ಸಂಪುಟ ಸಭೆ ಕರೆದ ಸಿಎಂ