Select Your Language

Notifications

webdunia
webdunia
webdunia
webdunia

ಶಾರ್ಟ್ ಸರ್ಕ್ಯೂಟ್; ಎಲೆಕ್ಟ್ರಾನಿಕ್ ವಸ್ತು ಭಸ್ಮ

short circuit; Electronic material burn
ತುಮಕೂರು , ಮಂಗಳವಾರ, 13 ಜೂನ್ 2023 (18:40 IST)
ಶಾರ್ಟ್ ಸರ್ಕ್ಯೂಟ್ ನಿಂದ ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣ ಭಸ್ಮವಾಗಿರುವ ಘಟನೆ ತುಮಕೂರು ತಾಲೂಕಿನ ಕಡಬ ಹೋಬಳಿಯ ಬಾಡೆನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಲೋಕೇಶ್ ಎಂಬುವರ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಘಟನೆ ನಡೆದಿದ್ದು ದೊಡ್ಡ ಅಪಾಯ ತಪ್ಪಿದೆ. KEB ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗಳಿಗೂ ಬೆಂಕಿ ಆವರಿಸಿದ್ದು, ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸಮಾರಂಭಗಳಿಗೆ ವಿಡಿಯೋ ಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ ಲೋಕೇಶ್ ತಮ್ಮ ಮನೆಯಲ್ಲಿದ್ದ ಕ್ಯಾಮೆರಾ, ಮಿಕ್ಸಿಂಗ್ ಯುನಿಟ್, ಎಲ್‌ಇ‌ಡಿ ಕಳೆದುಕೊಂಡು ಕಂಗಾಲಾಗಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಲಕ್ಷಾಂತರ ರೂ ನಷ್ಟ ಉಂಟಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಸ್ ಫ್ರೀ ಇದ್ರೂ ಮಹಿಳಾ ಪ್ರಯಾಣಿಕರಿಲ್ಲ