Select Your Language

Notifications

webdunia
webdunia
webdunia
Tuesday, 1 April 2025
webdunia

ಬೆಂಗಳೂರು ಕಡೆಗೆ ಹೋಗುವ ಬಸ್​ಗಳು ಫುಲ್ ರಶ್.!

Buses going towards Bangalore are in full rush
ramnagara , ಮಂಗಳವಾರ, 13 ಜೂನ್ 2023 (17:05 IST)
ಶಕ್ತಿ ಯೋಜನೆ ಘೋಷಣೆಯಾದ ಎರಡನೇ ದಿನವೇ ಬಸ್‌ ವ್ಯವಸ್ಥೆ ಸರಿಯಾಗಿಲ್ಲದೇ ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ. ರಾಮನಗರದಲ್ಲಿ ಪ್ರಯಾಣಿಕರು ಬಸ್​​ಗಾಗಿ ಪರದಾಡಿದರು. ಬೆಂಗಳೂರು ಕಡೆಗೆ ಹೋಗುವ ಬಸ್ ಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ತುಂಬಿದ್ದರು. ಶಕ್ತಿ ಯೋಜನೆ ಹಿನ್ನೆಲೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು, ನಿತ್ಯ ಕೆಲಸಕ್ಕೆ ಹೋಗುವವರು, ಕಾಲೇಜು ವಿದ್ಯಾರ್ಥಿಗಳು ಬಸ್ ಹತ್ತಲಾಗದಂತಹ ಸ್ಥಿತಿಯುಂಟಾಯಿತು. ಬಸ್ ರಶ್ ಇದ್ದುದರಿಂದ
ಫುಟ್​ಬೋರ್ಡ್ ಮೇಲೆ ನಿಂತು ಪ್ರಯಾಣ ಮಾಡುವ ಪರಿಸ್ಥಿತಿ ಎರುರಾಗಿದೆ. ಸರಿಯಾದ ಪ್ರಮಾಣದಲ್ಲಿ ಬಸ್ ವ್ಯವಸ್ಥೆ ಮಾಡದ KSRTC ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಕಿಡಿಕಾರಿದ್ದರಲ್ಲದೇ ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ರೆ ಸಾಲದು, ಸಮರ್ಪಕ ಬಸ್ ವ್ಯವಸ್ಥೆ ಮಾಡಿ ಎಂದು ಸರ್ಕಾರದ ವಿರುದ್ಧವೂ ಮಹಿಳಾ ಪ್ರಯಾಣಿಕರು ಕಿಡಿಕಾರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದೆ ತಮಿಳು ನಾಯಕನಿಗೆ ಪ್ರಧಾನಿ ಪಟ್ಟ