ಜ್ಯುವೆಲರಿ ಶಾಪ್ ಮಾಲಿಕನೊಬ್ಬನ ಮೇಲೆ ಗುಂಡಿನ ದಾಳಿ ನಡೆದಿದೆ.
ಚಿಕ್ಕಮಗಳೂರು ನಗರದ ಎಂ.ಜಿ . ರಸ್ತೆಯ ಕೇಸರಿ ಜ್ಯುವೆಲರಿ ಶಾಪ್ ಮಾಲೀಕನ ಮೇಲೆ ಗುಂಡಿನ ದಾಳಿ ನಡೆದಿದೆ.
ಚಿನ್ನದ ಅಂಗಡಿ ಮಾಲೀಕ ಜಸ್ಸು ಎಂಬುವರ ಮೇಲೆ ಹಾಡು ಹಗಲೇ ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಅದೃಷ್ಟವಶತ್ ಜಸ್ಸು ಅವರಿಗೆ ಸರಿಯಾಗಿ ಗುಂಡು ತಗುಲದೆ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ದಾಳಿಕೋರರ ಪತ್ತೆಗೆ ಬಲೆ ಬೀಸಿದ್ದಾರೆ.