Publish Date: Thu, 14 Feb 2019 (15:18 IST)
Updated Date: Thu, 14 Feb 2019 (15:22 IST)
ತಮ್ಮ ಮಗನಿಗೆ ಉಪಹಾರ ಸಿದ್ಧಪಡಿಸುತ್ತಿದ್ದಾಗ ಪುಳಿಯೋಗರೆ ಪ್ಯಾಕೇಟ್ ನಲ್ಲಿದ್ದದ್ದನ್ನು ನೋಡಿ ವ್ಯಕ್ತಿಯೊಬ್ಬರು ಹೌಹಾರಿದ ಘಟನೆ ನಡೆದಿದೆ.
ಪುಳಿಯೋಗರೆ ಪ್ಯಾಕೇಟ್ ನಲ್ಲಿ ಹಲ್ಲಿ ಪತ್ತೆಯಾದ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ತೊಡರನಾಳ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಎಂಟಿಆರ್ ಕಂಪನಿಯ ಪುಳಿಯೊಗರೆ ಪ್ಯಾಕೇಟ್ ನಲ್ಲಿ ಹಲ್ಲಿ ಪತ್ತೆಯಾಗಿದೆ.
ಪುಳಿಯೋಗರೆ ಸೇವಿಸಿ ಕೆಲಸಕ್ಕೆ ಹೋದಾಗ ಪ್ರಭು ಎಂಬುವರು ಅಸ್ವಸ್ಥರಾಗಿದ್ದಾರೆ. ಪುಳಿಯೋಗರೆಯ ಪ್ಯಾಕೇಟ್ ನಲ್ಲಿ ಅರ್ಧ ಭಾಗ ಮಾತ್ರ ಬಳಕೆ ಮಾಡಿದ್ದರು. ಪ್ರಭು ಅವರ ಪುತ್ರ ಪ್ರಜ್ವಲ್ ಗೆ ಉಪಹಾರ ಸಿದ್ಧಪಡಿಸುವಾಗ ಅದರಲ್ಲಿ ಹಲ್ಲಿ ಪತ್ತೆಯಾಗಿದೆ.
ಅಸ್ವಸ್ಥರಾದ ಪ್ರಭುಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಧಾವಿಸದ ಆರೋಗ್ಯಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿರುವ ಪ್ರಭು, ಕಂಪನಿ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ.